ಲಿಂಗಸುಗೂರಲ್ಲಿ RTO ಕಚೇರಿ ಆರಂಭಿಸಲು ಆಗ್ರಹಿಸಿ ಪ್ರತಿಭಟನೆ
ಲಿಂಗಸುಗೂರು : ಪಟ್ಟಣದಲ್ಲಿ ಆರ್‍ಟಿಒ ಕಚೇರಿನ್ನು ಸರಕಾರ
ಆರಂಭಿಸಬೇಕೆಂದು ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಲಾಯಿತು.
ಸ್ಥಳೀಯ ಗಡಿಯಾರ ಚೌಕದಿಂದ ಪ್ರತಿಭಟನಾ ರ್ಯಾಲಿಯ
ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿದ
ಪ್ರತಿಭಟನಾಕಾರರು ತಹಸೀಲ್ದಾರ್ ಚಾಮರಾಜ ಪಾಟೀಲ್‍ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
1905ರಲ್ಲಿ ಲಿಂಗಸುಗೂರು ಜಿಲ್ಲಾ ಕೇಂದ್ರವಾಗಿತ್ತು.
ಸ್ವಾತಂತ್ರದ ಬಳಿಕ ಉಪವಿಭಾಗವಾಯಿತು. ಸರಕಾರ ಯಾವುದೇ ಹೊಸತಾಗಿ ಕಚೇರಿಗಳನ್ನು ಆರಂಭಿಸುವ ಮುನ್ನ ಉಪವಿಭಾಗಕ್ಕೆ ಆಧ್ಯತೆ ನೀಡಬೇಕಾಗುತ್ತದೆ. ಈ ಹಿಂದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜೆಸ್ಕಾಂ ವಿಭಾಗೀಯ ಕಚೇರಿ ಸಿಂಧನೂರಿಗೆ ಸ್ಥಳಾಂತರ ಮಾಡಲಾಗಿತ್ತು. ಈಗ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಸಿಂಧನೂರಿನಲ್ಲಿ ಆರಂಭಿಸುವ ಹುನ್ನಾರ ನಡೆದಿರುವುದು ಖಂಡನೀಯ.
ಲಿಂಗಸುಗೂರು ಶಾಸಕರ ನಿರ್ಲಕ್ಷ್ಯತನದಿಂದ ಪಟ್ಟಣಕ್ಕೆ
ಆರ್‍ಟಿಒ ಕಚೇರಿ ಕೈ ತಪ್ಪುವ ಸಾಧ್ಯತೆಗಳು ಮೇಲ್ನೋಟಕ್ಕೆ
ಕಂಡು ಬರುತ್ತಿರುವುದು ವಿಷಾದನೀಯ. ಲಿಂಗಸುಗೂರು
ತಾಲೂಕು ಮೂರು ದೊಡ್ಡ ಪಟ್ಟಣಗಳನ್ನು ಹೊಂದಿದ್ದು, ದಕ್ಷಿಣ ಏಷಿಯಾದಲ್ಲೇ ಅತಿ ಹೆಚ್ಚು ಚಿನ್ನ ತೆಗೆಯುವ ಗಣಿಯನ್ನು,ಮುದಗಲ್ ಐತಿಹಾಸಿಕ ಕೋಟೆಯನ್ನೂ ಹೊಂದಿದ ಖ್ಯಾತಿ ಇದೆ.ಅಲ್ಲದೇ, ಆರ್‍ಟಿಒ ಕಚೇರಿ ನಿರ್ಮಾಣಕ್ಕೆ ಎಲ್ಲಾ ಅರ್ಹತೆಗಳನ್ನೂ ಹೊಂದಿದೆ.
ಸಿಂಧನೂರು ನಗರವೂ ಲಿಂಗಸುಗೂರು ಉಪವಿಭಾಗದ
ವ್ಯಾಪ್ತಿಯಲ್ಲೇ ಬರುವದರಿಂದ ಸರಕಾರ ಕೂಡಲೇ ಲಿಂಗಸುಗೂರಿಗೆ ಆರ್‍ಟಿಒ ಕಚೇರಿ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಕರವೇ ಅದ್ಯಕ್ಷ ಜಿಲಾನಿಪಾಷಾ, ಜಯಕರ್ನಾಟಕ ಅದ್ಯಕ್ಷ
ಬಾಲನಗೌಡ, ಕಲ್ಯಾಣ ಕರ್ನಾಟಕ ಅದ್ಯಕ್ಷ ರಾಜು ತಂಬಾಕೆ, ಕರುನಾಡ ವಿಜಯಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರ ಗಾಣದಾಳ,ಚಾಲಕರ ಸಂಘದ ಅದ್ಯಕ್ಷ ರುಸ್ತುಂಖಾನ್, ಕರವೇ ಶೆಟ್ಟಿ ಬಣದ ಅದ್ಯಕ್ಷ ಆಂಜನೇಯ ಭಂಡಾರಿ, ನಮ್ಮ ಕರವೇ ಅದ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು, ಕರುನಾಡ ಸೇನೆ ಅದ್ಯಕ್ಷ ಶಿವನಗೌಡ ಕೆ., ಅಟೋ ಚಾಲಕರ ಸಂಘದ ಅದ್ಯಕ್ಷ ಮಹ್ಮದ್ ರಫಿ, ಬೀದಿ ವ್ಯಾಪಾರಿಗಳ ಸಂಘದ ಅದ್ಯಕ್ಷ ಮಹಿಬೂಬಸಾಬ, ವಿವಿಧ ಸಂಘಟನೆಗಳ
ಮುಖಂಡರುಗಳಾದ ಬಾಬಾಜಾನಿ, ಅಬ್ದುಲ್ ಸತ್ತರ, ಸುಲೆಮಾನ್,ಅಬ್ದುಲ್ ಮುಜೀಬ್ ಸೇರಿ ಇತರರು ಪ್ರತಿಭಟನಾ ರ್ಯಾಲಿಯಲ್ಲಿ ಇದ್ದರು.

