ರಾಯಚೂರು

ಗಮೇಸಾ ಕಂಪನಿಯ ಕಾರ್ಮಿಕರ ಹೋರಾಟಕ್ಕೆ SFI – DYFI ಬೆಂಬಲ

ಕವಿತಾಳ : ಸಿರವಾರ ತಾಲೂಕಿನ ಕವಿತಾಳ ಪಕ್ಕದ ತೊಪ್ಪಲದೊಡ್ಡಿ ಹತ್ತಿರ ಇರುವ ಗಮೇಸಾ ವಿಂಡ್ ಟರ್ಬೈನ್ ಹೆಸರಿನ ಗಾಳಿ ಹಾಗೂ ಸೂರ್ಯನ ಕಿರಣಗಳಿಂದ ವಿದ್ಯತ್ ಉತ್ಪಾದಿಸುವ ತೊಪ್ಪಲದೊಡ್ಡಿ ಘಟಕದಲ್ಲಿ 2015ರಿಂದ ಕೆಲಸ ಮಾಡುತಿದ್ದ ಸುಮಾರು 20ಜನ ಕಾರ್ಮಿಕರನ್ನು ನಿಯಮ ಬಾಹಿರವಾಗಿ ಕೆಲಸದಿಂದ ವಜಾ ಮಾಡಿದ್ದು, ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸಿ ಕಂಪನಿಯ ಮುಂಭಾಗದಲ್ಲಿ CITU ನೇತೃತ್ವದಲ್ಲಿ ನಡೆಯುತ್ತಿರುವ ಎರಡನೆಯ ದಿನದ ಹೋರಾಟ ಕ್ಕೆ
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ ( DYFI ), ಭಾರತ ವಿದ್ಯಾರ್ಥಿ ಫೆಡರೇಷನ್‌ ( SFI ) ಹಾಗೂ ಇತರೆ ಸಂಘಟನೆ ಗಳ ಕಾರ್ಯಕರ್ತರು ಭಾಗವಹಿಸಿ ಬೆಂಬಲ ಸೂಚಿಸಿದರು.

ಹೋರಾಟವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಗಮೇಸಾ ವಿಂಡ್ ಟರ್ಬೈನ್ ಕಂಪನಿಯು ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿ ಮನಬಂದಂತೆ ಕೆಲಸ ಮಾಡುತ್ತಿದೆ. ಆರಂಭದಲ್ಲಿ ಈ ಕೆಲಸ ಮಾಡಿದಾಗ ನಾವು ಮಧ್ಯ ಪ್ರವೇಶ ಮಾಡಿ ತಕ್ಕ ಪಾಠ ಕಲಿಸಿದ್ದೇವು ಈಗ ಮತ್ತೆ ತನ್ನ ಹಳೆಯ ಛಾಳಿಯನ್ನು ಮುಂದುವರಿಸಿದೆ ಜೊತೆಗೆ ಕಳೆದ ಆರು ವರ್ಷಗಳ ಹಿಂದಿನಿಂದಲೂ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಈಗ ಕುಂಟು ನೆಪ ಇಟ್ಟುಕೊಂಡು ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿ ಸ್ಥಳೀಯರಲ್ಲದ ಹೊರ ರಾಜ್ಯದ ಕಾರ್ಮಿಕರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸುತ್ತಿದ್ದಾರೆ ಭೂಮಿ, ಗಾಳಿ, ನೀರು ನಮ್ಮದಾದರು ಕೆಲಸ ಮಾತ್ರ ನಮ್ಮಗೆ ಇಲ್ಲದಿರುವುದು ದುರಂತ ಕೂಡಲೇ ಕಾರ್ಮಿಕರನ್ನು ಮರು ನೇಮಕ ಮಾಡಿಕೊಂಡು ಅವರಿಗೆ ನೀಡಬೇಕಾದ ಕಾನೂನು ಬದ್ದ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.

ಈ ಕಂಪನಿಯು ನೈಸರ್ಗಿಕ ಗಾಳಿಯ ಮೂಲಕ ವಿದ್ಯುತ್ ಉತ್ಪಾದಿಸುವ ಘಟಕವಾಗಿದೆ ಇದರಲ್ಲಿ ಸುಮಾರು 20 ಜನ ಕಾರ್ಮಿಕರು ಕಳೆದ 7 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತಿದ್ದರು ಸದರಿ ಕಾರ್ಮಿಕರು ತಮಗೆ ಬರಬೇಕಾದ ಕಾನೂನುಬದ್ದ ಸೌಲಭ್ಯಗಳನ್ನು ಒದಗಿಸಲು ಒತ್ತಾಯ ಮಾಡಿದ ಕಾರಣ ಉದ್ದೇಶ ಪೂರ್ವಕವಾಗಿ ಸದರಿ ಸಂಸ್ಥೆಯ ಗುತ್ತಿಗೆದಾರರ ಗುತ್ತಿಗೆ ಅವಧಿಯು ಮುಕ್ತಾಯವಾಗಿದೆ ಎಂಬ ನೆಪ ಒಡ್ಡಿ ಹಾಲಿ ಕಾರ್ಮಿಕರನ್ನು ದಿನಾಂಕ 20-02-2021 ರಿಂದ ಕೆಲಸಕ್ಕೆ ಬರದಂತೆ ಕೆಲಸದಿಂದ ನಿಯಮ ಬಾಹಿರವಾಗಿ ವಜಾ ಮಾಡಿದ್ದು ಖಂಡನೀಯ. ಕಾರ್ಮಿಕರ ಕಾನೂನು ಬದ್ದ ಬೇಡಿಕೆಗಳ ಕುರಿತು ಮಾನ್ಯ ಕಾರ್ಮಿಕ ಅಧಿಕಾರಿಗಳು ರಾಯಚೂರು ಇವರಿಗೆ ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೆ ಮಾಲಿಕರು ಕಾರ್ಮಿಕ ಇಲಾಖೆಯ ಯಾವುದೇ ಸೂಚನೆಗಳನ್ನು, ಆದೇಶಗಳನ್ನು ಮತ್ತು ನಿಯಮಗಳನ್ನು ಇಲ್ಲಿಯವರೆಗೂ ಪಾಲಿಸುತ್ತಿಲ್ಲ. ಕಾರಣ ಪರಿಸಿಲಿಸಿ ಸದರಿ ಸಂಸ್ಥೆಯ ಮಾಲಿಕರಿಗೆ ಕಾರ್ಮಿಕ ಇಲಾಖೆಯ ನಿರ್ದೇಶನ, ಸೂಚನೆ ಪಾಲಿಸುವಂತೆ ಮತ್ತು ಕಾರ್ಮಿಕರನ್ನು ಪುನ ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಸಿಗಬೇಕಾದ ಎಲ್ಲಾ ರೀತಿಯ ಕಾನೂನಾತ್ಮಕ ಸೌಲಭ್ಯಗಳನ್ನು ಒದಗಿಸುವಂತೆ ಮಾಡಲು ಜಿಲ್ಲಾಧಿಕಾರಿ ಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಸೂಕ್ತ ಕ್ರಮ ಜರುಗಿಸಲು ಮುಂದಾಗಬೇಕು ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಕಂಪನಿಗೆ ಬೀಗ ಮುದ್ರೆಯನ್ನು ಹಾಕಿ ಹೋರಾಟ ವನ್ನು ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು.

ಈ ಹೋರಾಟ ದಲ್ಲಿ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್,
SFI ಕವಿತಾಳ ಘಟಕದ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ, ಮುಖಂಡರಾದ ನಾಗಮೋಹನ್ ಸಿಂಗ್, ಮಲ್ಲಿಕಾರ್ಜುನ, ಮಹಾದೇವ ಬಿ, ಮರಿಸ್ವಾಮಿ, ಯಂಕೋಬಾ ತೊಪ್ಪಲದೊಡ್ಡಿ, ಕಾರ್ಮಿಕರಾದ ಸಿದ್ದರಾಮ, ಲಕ್ಷ್ಮಣ್ ಸಿಂಗ್, ಮಹೇಶ್, ಅಮರೇಶ, ಶರಬಸವ, ನಿಂಗಪ್ಪ, ಸಮೀರ್, ಜಾಹೀದ್, ಅರುಣ್ ಕುಮಾರ್, ದೇವರಾಜ ಗ್ರಾಮಸ್ಥರಾದ ರಮೇಶ್ ಹುಸೇನಪುರ್, ಮೌನೇಶ ಬಡಿಗೇರ್, ಬಸವರಾಜ ಸಾಹುಕಾರ್, ಮಲ್ಲಯ್ಯ ಮೇಟಿ ತೊಪ್ಪಲದೊಡ್ಡಿ, ಉಮೇಶ್ ತೊಪ್ಪಲದೊಡ್ಡಿ, ಗೋವಿಂದಪ್ಪ, ಹನುಮಂತ, ಶರಣಪ್ಪ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!