ವೀಕೆಂಡ್ ಲಾಕ್‍ಡೌನ್ : ಎಣ್ಣೆ ಖರೀದಿಗೆ ಮುಗಿಬಿದ್ದಮಹಿಳೆಯರು..!
ಲಿಂಗಸುಗೂರು : ವೀಕೆಂಡ್ ನಿಮಿತ್ಯ ಶನಿವಾರ-ಭಾನುವಾರ ಸಂಪೂರ್ಣಲಾಕ್‍ಡೌನ್ ಆಗುತ್ತೆನ್ನುವ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಮಧ್ಯಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. ಆದರೆ, ಸ್ಥಳೀಯ ಎಂಎಸ್‍ಐಎಲ್ಮಳಿಗೆಯಲ್ಲಿ ಮಹಿಳೆಯರೂ ಮುಗಿಬಿದ್ದು ಎಣ್ಣೆ ಖರೀದಿ ಮಾಡುವುದರಲ್ಲಿನಿರತರಾಗಿರುವುದು ಕಂಡುಬಂತು.ಸ್ಥಳೀಯ ಬಸ್ಟಾಂಡ್ ಪಕ್ಕ ಇರುವ ಸರಕಾರಿ ಬಾರ್ ಶಾಪ್‍ನಲ್ಲಿ ಕ್ವಾಟರ್,ಬಿಯರ್, ಬ್ರಾಂಡಿ, ವಿಸ್ಕಿ ಬಾಟಲ್‍ಗಳನ್ನು ಎರಡು ದಿನಗಳ ಮಟ್ಟಿಗೆ ಸ್ಟಾಕ್ಮಾಡಿಕೊಳ್ಳಲು ಎಣ್ಣೆಪ್ರೀಯರು ಸರದಿ ಸಾಲಿನಲ್ಲಿ ಬಂದು ಖರೀದಿ ಮಾಡಿದರು.ಏತನ್ಮಧ್ಯೆ ಗ್ರಾಮೀಣ ಪ್ರದೇಶದ ಮಹಿಳೆಯರೂ ಕೈಚೀಲದಲ್ಲಿಕ್ವಾಟರ್‍ಗಳನ್ನು ಕೊಂಡೊಯ್ಯುತ್ತಿರುವುದು ಸಾರ್ವಜನಿಕರಲ್ಲಿ ಅಚ್ಚರಿಮೂಡಿಸಿದ್ದಂತೂ ಸುಳ್ಳಲ್ಲ.ಶನಿವಾರ-ಭಾನುವಾರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರಅಗತ್ಯ ವಸ್ತುಗಳ ಖರೀದಿಗೆಂದು ಬಿಡುವು ನೀಡಲಾಗಿದೆ.
ಆದರೆ,ಮಧ್ಯವೆಸನಿಗಳಿಗೆ ಎರಡು ದಿನ ಕುಡಿಯದೇ ಇರುವುದು ಎಂದರೆಪಾದದಡಿಯ ನೆಲವೇ ಕುಸಿದಂತಾಗುತ್ತೆನ್ನುವ ಮಾತುಗಳಿಗೆ ಇಂದುಕಂಡ ದೃಶ್ಯ ಸಾಕ್ಷೀಕರಿಸುವಂತಿತ್ತು.ಸರಕಾರದ ಆದೇಶಗಳು ದಿನದಿಂದ ದಿನಕ್ಕೆಕಠಿಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಧ್ಯವೆಸನಿಗಳು ಈಗಾಗಲೇಎಣ್ಣೆಯನ್ನು ಸ್ಟಾಕ್ ಮಾಡಿಕೊಳ್ಳುವತ್ತ ತಯಾರಾಗುತ್ತಿದ್ದಾರೆ.ಬಡವರಿಗೆ, ಶ್ರಮಿಕರಿಗೆ ಸಂಸಾರ ನೌಕೆ ಸಾಗಿಸುವುದು ದುಸ್ತರವಾಗುತ್ತಿದೆ.ದುಡಿದು ತಂದ ಕೂಲಿಯಿಂದಲೇ ಒಲೆ ಹೊತ್ತಿಸುವ ಕುಟುಂಬಗಳ ಮಧ್ಯೆವೆಸನಿಗಳ ಚಿಂತಯೇ ಬೇರೆಯಾಗಿದೆ. ಕುಡಿತದ ಅಮಲಿನಲ್ಲಿ ಕೌಟುಂಬಿಕಕಲಹಗಳು ಹೆಚ್ಚುತ್ತಿರುವ ನಿದರ್ಶನಗಳು ಇತ್ತೀಚೆಗೆಹೆಚ್ಚುತ್ತಿದ್ದಾಗ್ಯೂ, ಚಟದಿಂದ ಮಾತ್ರ ಕುಡುಕ ಮಹಾಶಯರುಮುಕ್ತರಾಗುವುದಿಲ್ಲ ಎನ್ನುವುದಂತೂ ಸತ್ಯ.

