ಲಿಂಗಸುಗೂರು : ಪತ್ರಕರ್ತ ನಾಗರಾಜ್ ಗೊರೇಬಾಳರಿಗೆ ಮಾತೃ ವಿಯೋಗ
ಲಿಂಗಸುಗೂರು : ಸ್ಥಳೀಯ ಹಿರಿಯ ಪತ್ರಕರ್ತ ನಾಗರಾಜ ಗೊರೇಬಾಳರ ತಾಯಿ ಶ್ರೀಮತಿ ಬಸ್ಸಮ್ಮ ಶಿವಪ್ಪ ಗೊರೇಬಾಳ (68) ದೈವಾದೀನರಾಗಿದ್ದಾರೆ.
ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದ ಮೃತರ ಅಂತ್ಯಕ್ರಿಯೆ ಶನಿವಾರ ಮದ್ಯಾಹ್ನ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ಜರುಗಲಿದೆ.
ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ರು, ಜಿಲ್ಲಾಧ್ಯಕ್ಷ ರು ಸೇರಿ ತಾಲೂಕು ಅಧ್ಯಕ್ಷ ರು ಹಾಗೂ ಸರ್ವ ಪದಾಧಿಕಾರಿಗಳು ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.

