ಪಾಸ್ ನವೀಕರಣ ಅರ್ಜಿ ಪಡೆಯಲು ಒತ್ತಾಯ
ಲಿಂಗಸುಗೂರು : ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನವೀಕರಣ ಮಾಡಲು ನೇರವಾಗಿ ಅರ್ಜಿಗಳನ್ನು ಸ್ವೀಕರಿಸಬೇಕೆಂದು ಕರ್ನಾಟಕ ರಾಜ್ಯ ಅಂಗವಿಕಲರ ಆರ್.ಪಿ.ಡಿ. ಟಾಸ್ಕ್‍ಫೋರ್ಸ್ ಅಂಗವಿಕಲರ ಸಂಘ ಸಂಸ್ಥೆಗಳ ಒಕ್ಕೂಟದ ಸದಸ್ಯರು ಒತ್ತಾಯಿಸಿದರು.
ಸಾರಿಗೆ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದ ಅವರು, ವಿಕಲಚೇತನರ ರಿಯಾಯಿತಿ ಬಸ್ ಪಾಸಿನ ಹೊಸ ಮತ್ತು ನವೀಕರಣ ಮಾಡಲು ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅನೇಕ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಮೊಬೈಲ್ ಸಂಖ್ಯೆಗಳು ಆಧಾರ್ ಕಾರ್ಡ್‍ಗೆ ಬಹುತೇಕ ಕಡೆಗಳಲ್ಲಿ ಲಿಂಕ್ ಇಲ್ಲದ ಕಾರಣ ತೊಂದರೆಯಾಗುತ್ತಿದೆ. ಇದನ್ನು ಪರಿಗಣಿಸಿ ನೇರವಾಗಿ ಅರ್ಜಿಗಳನ್ನು ಪಡೆಯಲು ಮುಂದಾಗಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುರೇಶ ಪಿ. ಭಂಡಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಸ್ಕಿಹಾಳ ನಾಗರಾಜ, ಜಿಲ್ಲಾ ಖಜಾಂಚಿ ಹುಸೇನಸಾಬ ಬನ್ನಿಗೋಳ, ರಹೆಮಾನದುಲಾ ಮುದಗಲ್, ವೀರಭದ್ರಪ್ಪ ಗೆಜ್ಜಲಗಟ್ಟಾ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

