ರಾಯಚೂರು

ಕವಿತಾಳ – ಟ್ಯಾಂಕರ್ ಮೂಲಕ ನೀರು ಹರಿಸಿ ಆಸರೆಯಾದ ಯುವ ನಾಯಕ ಕಿರಿಲಿಂಗಪ್ಪ ಮ್ಯಾಗಳಮನಿ.


ಕವಿತಾಳ, ಏ.19 :ಪಟ್ಟಣದ ಜನತೆ ಬೀರು ಬೇಸಗೆಯಲ್ಲಿ ತೀವ್ರವಾಗಿ ನೀರಿನ ಸಮಸ್ಯೆ ಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಜನತಾ ಕಾಲೋನಿಯ 5 ಮತ್ತು 6 ವಾರ್ಡಿನಲ್ಲಿ ತೀವ್ರವಾದ ನೀರಿನ ಸಮಸ್ಯೆ ಇದೆ. ಪಟ್ಟಣದಲ್ಲಿರುವ 110 ಕೆವಿ ಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಕಾರಣ ಬಹುತೇಕ ವಾರ್ಡಗಳಿಗೆ ನೀರು ಸರಬರಾಜು ಕಡಿತಗೊಂಡಿತ್ತು, ನೀರು ಬರದ ಕಾರಣ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ಪರಿಣಾಮ ನೀರಿನ ಸಮಸ್ಯೆ ಅರಿತುಕೊಂಡ ಜೆಡಿಎಸ್ ಯುವ ಮುಖಂಡ ಕಿರಿಲಿಂಗಪ್ಪ ಮ್ಯಾಗಳಮನಿ ತಮ್ಮ ಸ್ವಂತ ಖರ್ಚಿನಲ್ಲಿ ಪಟ್ಟಣದ ನಿವಾಸಿಗಳಿಗೆ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವ ಮೂಲಕ ಜನತೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಕೋಟ್ – ಬಹಳ ದಿನದಿಂದ ನೀರಿನ ಸಮಸ್ಯೆ ಇದೆ ಈಗ ಬೇಸಿಗೆ ಕಾಲ ಜಾಸ್ತಿ ಆಗಿದೆ, ಎರಡು ದಿನಗಳು ನೀರು ಬರಲ್ಲ ಅಂತಾ ತಿಳಿದ ಕಿರಿಲಿಂಗಪ್ಪ ಮ್ಯಾಗಳಮನಿ, ತಮ್ಮ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ತರಿಸಿ ನೀರು ಕೊಟ್ಟಾರ, ದೇವರು ಇವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ ಕೊಡಲಿ – ರಂಗಪ್ಪ, ವೀರಭದ್ರ, ಈರಮ್ಮ, ಮಲ್ಲಮ್ಮ.
ವಾರ್ಡಿನ ನಿವಾಸಿಗಳು

Leave a Reply

Your email address will not be published. Required fields are marked *

error: Content is protected !!