ಜಂಗೀರಾಂಪುರ ತಾಂಡ ಯುವಕರು ಕರವೇಗೆ ಸೇರ್ಪಡೆ
ಲಿಂಗಸುಗೂರು : ತಾಲೂಕಿನ ಜಂಗೀರಾಂಪುರ ತಾಂಡಾದ ಯುವಕರು ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ ಜಿಲಾನಿಪಾಷಾರ ಸಮ್ಮುಖದಲ್ಲಿ ಸಂಘಟನೆಗೆ ಸೇರ್ಪಡೆಯಾದರು. ಇವರಲ್ಲಿ ಅವಜಪ್ಪ ಲಿಂಬಪ್ಪರಿಗೆ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.
ಕನ್ನಡ ನಾಡು, ನುಡಿ, ಜಲ, ಗಡಿಯ ವಿಚಾರವಾಗಿ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವಂತೆ ಕರವೇ ಅದ್ಯಕ್ಷ ಜಿಲಾನಿಪಾಷಾ ಕರೆ ನೀಡಿದರು.
ಕರವೇ ಪ್ರದಾನ ಕಾರ್ಯದರ್ಶಿ ಶಿವರಾಜ ನಾಯ್ಕ, ಖಜಾಂಚಿ ಅಜೀಜಪಾಷಾ ಸೇರಿ ಇತರರು ಇದ್ದರು.

