ಲಿಂಗಸುಗೂರು ಪುರಸಭೆಯ ಸ್ಥಾಯಿಸಮಿತಿ ಅದಕ್ಷರಾಗಿ ಪ್ರಮೋದ ಕುಲಕರ್ಣಿ ಅವಿರೋಧ ಆಯ್ಕೆ ಆಡಳಿತ ಮಂಡಳಿ ಸಹಕಾರದಿಂದ ಅಭಿವೃದ್ಧಿಗೆ ಆಧ್ಯತೆ : ಕುಲಕರ್ಣಿ
ಲಿಂಗಸುಗೂರು : ಶಾಸಕ ಡಿ.ಎಸ್.ಹೂಲಗೇರಿಯವರ ಮಾರ್ಗದರ್ಶನ ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಪಟ್ಟಣ ಅಭಿವೃದ್ಧಿಗೆ ಆಧ್ಯತೆ ನೀಡುವ ಜೊತೆಗೆ ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಕೆಲಸಕ್ಕೆ ಚುರುಕು ನೀಡುವುದಾಗಿ ಸ್ಥಾಯಿ ಸಮಿತಿ ಅದ್ಯಕ್ಷ ಪ್ರಮೋದಕುಮಾರ ಕುಲಕರ್ಣಿ ಹೇಳಿದರು.
ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸ್ಥಾಯಿಸಮಿತಿ ಅದ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಆಯ್ಕೆಗೆ ಸಹಕರಿಸಿ ಪುರಸಭೆಯ ಎಲ್ಲಾ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಪುರಸಭೆ ಕಚೇರಿಯಲ್ಲಿ ಇತ್ತೀಚೆಗೆ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ಗಮನಕ್ಕಿದೆ. ಆಸ್ತಿ ವರ್ಗಾವಣೆ, ಖಾತಾನಕಲು, ಪೌರಕಾರ್ಮಿಕರ ಸಮಸ್ಯೆಗಳು ಸೇರಿ ನಾನಾ ಕೆಲಸಗಳ ನಿರ್ವಹಣೆ ಮಂದಗತಿಯಲ್ಲಿ ಸಾಗುತ್ತಿವೆ. ಅದ್ಯಕ್ಷ-ಉಪಾದ್ಯಕ್ಷರ ಸಹಕಾರದಿಂದ ಮಾದರಿ ಪುರಸಭೆ ಮಾಡುವುದಾಗಿ ಭರವಸೆ ನೀಡಿದರು.
ಪುರಸಭೆ ಉಪಾದ್ಯಕ್ಷ ಮೊಹ್ಮದ್‍ರಫಿ, ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಸದಸ್ಯರಾದ ಮೌಲಾಸಾಬ ಗೌಳಿ, ಶಿವರಾಯ ದೇಗಲಮಡಿ, ಯಮನಪ್ಪಗೌಡ ಮೇಟಿ, ಕುಪ್ಪಮ್ಮ ಬಸವರಾಜ, ಮಂಜುಳಾ ಶರಣಪ್ಪ, ಶಾಂತಮ್ಮ ಶಿವಪ್ಪ, ಶರಣಪ್ಪ ಕಂಗೇರಿ, ಗಿರಿಜಮ್ಮ ವಿರುಪಾಕ್ಷ, ಬಾಬುರೆಡ್ಡಿ, ಫಾತೀಮಾಬೀ ಸೇರಿ ಇತರರು ಇದ್ದರು.

