ವಸತಿ ನಿಲಯ ವಿದ್ಯಾರ್ಥಿಗಳಿಗೆ ಕೋರಿಕೆ ಬಸ್‍ನಿಲ್ದಾಣ ನಿರ್ಮಾಣಕ್ಕೆ ಒತ್ತಾಯ
ಲಿಂಗಸುಗೂರು : ಪಟ್ಟಣದ ಹೊರವಲಯದಲ್ಲಿರುವ ಮೆಟ್ರಿಕ್ ನಂತರದ ಹಾಸ್ಟೆಲ್‍ಗಳ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಸಾರಿಗೆ ಬಸ್‍ಗಳ ಕೋರಿಕೆ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಶಿರಸ್ತೆದಾರರ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ, ಕರಡಕಲ್ ಹೊರವಲಯದಲ್ಲಿರುವ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡ, ಡಿ.ದೇವರಾಜ ಅರಸು, ಅಂಬೇಡ್ಕರ್, ಅಲ್ಪಸಂಖ್ಯಾತರ ವಸತಿ ನಿಲಯಗಳು ಸೇರಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಇದ್ದಾರೆ. ನಾಲ್ಕಾರು ಕಿ.ಮೀ. ದೂರದ ಕಾಲೇಜುಗಳಿಗೆ ಓದಲು ಹೋಗುತ್ತಾರೆ. ವಸತಿ ನಿಲಯಗಳ ಮುಂದೆಯೇ ಬಸ್‍ಗಳು ಓಡಾಡುತ್ತವಾದರೂ ವಿದ್ಯಾರ್ಥಿಗಳಿಗಾಗಿ ನಿಲ್ಲಿಸುವುದಿಲ್ಲ. ಕೂಡಲೇ ಬಸ್‍ಗಳ ನಿಲುಗಡೆಗೆ ಕ್ರಮ ಕೈಗೊಳ್ಳುವ ಜೊತೆಗೆ, ಪಾಸ್‍ಗಳಿಗೆ ವಿಶೇಷ ಸೀಲ್‍ಗಳನ್ನು ಹಾಕುವ ಮೂಲಕ ವಸತಿ ನಿಲಯದಿಂದ ಸಂಚರಿಸಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಜಿಲ್ಲಾಧ್ಯಕ್ಷ ಅಮರೇಶ ನಾಯಕ ಐದಭಾವಿಯವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಅಶೋಕ ನಾಯಕ ದಿದ್ದಿಗಿ, ವೆಂಕಿ ನಾಯಕ ಮುರ್ಖಿಗುಡ್ಡ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ರಾಜ್, ಸದಾನಂದ ನಾಯಕ, ಕಳಸಪ್ಪ ನಾಯಕ, ಅಂಜಿ ನಾಯಕ ಕೊಡೇಕಲ್, ಹನುಮನಗೌಡ ಗೋನವಾಟ್ಲಾ, ಸುರೇಶ ಅಡವಿಭಾವಿ, ರಮೇಶ ಅಡವಿಭಾವಿ, ಅಮರೇಶ ಕಾಚಾಪುರ, ದುರ್ಗೇಶ ಹಾಲಭಾವಿ, ಪ್ರಶಾಂತ, ತಿಮ್ಮನಗೌಡ, ಮಂಜುನಾಥ ಗುಂತಗೋಳ ಸೇರಿ ಇತರರು ಇದ್ದರು.

