ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯ
ಲಿಂಗಸುಗೂರು : ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಸವಿತಾ ಸಮಾಜದ ಮುಖಂಡರು ಒತ್ತಾಯಿಸಿದರು.
ಸಹಾಯಕ ಆಯುಕ್ತ ರಾಹುಲ್ ಸಂಕನೂರರ ಮೂಲಕ
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ರಾಜ್ಯದಲ್ಲಿ ಆರ್ಥಿಕವಾಗಿ,ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮಾಜಗಳಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವ ಸವಿತಾ ಸಮಾಜವೂ ಒಂದಾಗಿದೆ.
ಸರಕಾರದಿಂದ ಯಾವುದೇ ಹೆಚ್ಚಿನ ಹಾಗೂ ನಿರ್ದಿಷ್ಟ ಸೌಲಭ್ಯಗಳು ನಮ್ಮ ಸಮಾಜಕ್ಕೆ ಇರುವುದಿಲ್ಲ. ಇದರಿಂದ ಈ ವೃತ್ತಿಯಿಂದ ಬರುವ ಅಲ್ಪ ಆದಾಯದಿಂದಲೇ ಸಮಾಜದಲ್ಲಿ ಬದುಕನ್ನು ಮಾಡಿಕೊಂಡು ನಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ಕೊಡಿಸಲು ಆಗದೇ, ಹಿಂದುಳಿದ ಸಮುದಾಯ ನಮ್ಮದಾಗಿದೆ. ಇಂದಿಗೂ ಸವಿತಾ ಸಮಾಜವನ್ನು ಹೀನಾಯವಾಗಿ
ಕಾಣಲಾಗುತ್ತಿದೆ. ಮಾನವ ದೇವರ ಸೃಷ್ಟಿ, ಸುಂದರ ಮಾನವ ಕ್ಷೌರಿಕನ ಸೃಷ್ಟಿ ಎಂಬುದನ್ನು ಮರೆತು ನಮ್ಮ ಸಮಾಜದವರನ್ನು ಅಸ್ಪøಶ್ಯ ಮನೋಭಾವದಿಂದ ಕಾಣುವುದು, ಮುಂಜಾನೆ ನಮ್ಮ ಸಮಾಜದ ಜನರ ಮುಖವನ್ನು ಮೋಡಿದರೆ ಅಪಶಕುನ ಎಂದು ಹೇಳುವುದು, ನಮ್ಮ ಸಮಾಜದವರಿಗೆ ಅಂಗಡಿ, ಮನೆಗಳನ್ನು ಬಾಡಿಗೆಗೆ ಕೊಡಲು ನಿರಾಕರಿಸುತ್ತಿರುವುದರಿಂದ ನಮ್ಮ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಕುಂಟಿತಗೊಂಡಿದೆ. ಇದರಿಂದ ನಮ್ಮ ಸಮಾಜವೂ ಇಂದಿಗೂ ಬಹಳ ಹೀನಾಯ ಪರಿಸ್ಥಿತಿಯಲ್ಲಿದೆ.
ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸವಿತಾ ಸಮಾಜವನ್ನು ಹೀನಾಯವಾಗಿ ಬಯ್ಯಲು ಉಪಯೋಗಿಸುತ್ತಿದ್ದ ಹಜಾಮ ಎಂಬ ಶದ್ಬವನ್ನು ಬಳಸಿದವರ ವಿರುದ್ಧ ಜಾಮೀನು ರಹಿತ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಕೂಲವಾಗುವಂತೆ ಸವಿತಾ ಸಮಾಜ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ರೂಪಿಸುವುದು. ಇದರಲ್ಲಿ ಸವಿತಾ ಸಮಾಜಕ್ಕೆ ಸಿಕ್ಕಿರುವ ಸರಕಾರಿ ಸೌಲಭ್ಯಗಳನ್ನು ಬೇರೆ ಸಮಾಜದವರು ಉಪಯೋಗಿಸಿದಲ್ಲಿ ಶಿಕ್ಷೆಗೆ ಗುರಿಪಡಿಸಲು ಅವಕಾಶ ಇರಬೇಕು. ಜಾತಿಯ ಆಧಾರದ ಮೇಲೆ ಮನೆಯನ್ನು ಅಂಗಡಿಗಳನ್ನು ಬಾಡಿಗೆಗೆ ಕೊಡಲು ನಿರಾಕರಿಸಿದಲ್ಲಿ ಶಿಕ್ಷೆಗೆ ಗುರಿಪಡಿಸಲು ಅವಕಾಶವಿರಬೇಕು ಎಂಬ ಬೇಡಿಕೆಗಳನ್ನು
ಈಡೇರಿಸಬೇಕೆಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ನಾಗರಾಜ ಗಸ್ತಿ ವಕೀಲರು, ನಾಗರಾಜ ಅಜ್ಜಕೊಲ್ಲಿ, ಅಮರೇಶ ಗಸ್ತಿ, ಕೆ.ಮೌನೇಶ, ಲಿಂಗಪ್ಪ ಹೆಗಡೆ, ರವಿ ಅಣ್ಣಿಗೇರಿ, ಮಲ್ಲಪ್ಪ ಬಯ್ಯಾಪೂರ, ಯಲ್ಲಪ್ಪ ಶಹಾಪೂರ, ಶ್ರೀಕಾಂತ ಗಸ್ತಿ, ಮೌನೇಶ ಹಟ್ಟಿ, ಸಿದ್ದಪ್ಪ ಕಟ್ಟಿಮನಿ, ಮಲ್ಲಪ್ಪ ಬಯ್ಯಾಪೂರ ಸೇರಿ ಇತರರು ಇದ್ದರು.

