ಪೋಲಿಸ್ ವೃತ್ತ ಉದ್ಘಾಟನೆ : ಸಂಚಾರಿ ನಿಯಮ ಪಾಲನೆಗೆ ಎಸ್‍ಪಿ ಕರೆ
ಲಿಂಗಸುಗೂರು : ಸಂಚಾರಿ ನಿಯಮಗಳನ್ನು ವಾಹನ ಸವಾರರು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತೆಯಿಂದ ವಾಹನ ಸವಾರಿ ಮಾಡುವ ಮೂಲಕ ಅಪಘಾತ ಮುಕ್ತ ಸಂಚಾರ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ಅಟೋ ಚಾಲಕರು, ದ್ವಿಚಕ್ರ ವಾಹನಗಳೂ ಸೇರಿ ವಾಹನ ಸವಾರರು ಸಂಚಾರ ನಿಯಮಗನ್ನು ಪಾಲನೆ ಮಾಡಬೇಕೆಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಕಮ್ ಪ್ರಕಾಶ ಅಮ್ರಿತ್ ಕರೆ ನೀಡಿದರು.
ಸ್ಥಳೀಯ ಬಸ್ಟಾಂಡ್ ವೃತ್ತದಲ್ಲಿ ಹೊಸತಾಗಿ ಸಿಪಿಐ ಮಹಾಂತೇಶ್ ಸಜ್ಜನ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಸಂಚಾರ ಪೋಲಿಸ್ ವೃತ್ತದ ಉದ್ಘಾಟಿಸಿ, 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ಯ ಅಟೋಗಳಿಗೆ ಭಿತ್ತಿಪತ್ರ ಅಂಟಿಸಿ ಮಾತನಾಡಿದ ಅವರು, ದಾರಿಹೋಕರಿಗೆ, ಪಾದಾಚರಿಗಳಿಗೆ ತೊಂದರೆ ಆಗದಂತೆ ವಾಹನ ಸವಾರರು ನಿಯಮಗಳನ್ನು ಪಾಲನೆ ಮಾಡಬೇಕು. ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು, ಧೂಮಪಾನ ಮಾಡುತ್ತಾ, ಮೊಬೈಲ್‍ನಲ್ಲಿ ಮಾತಾಡುತ್ತಾ ವಾಹನಗಳ ಚಾಲನೆ ಮಾಡುವುದು ಜೀವಕ್ಕೆ ಆಪತ್ತು ತರುತ್ತವೆ. ಅಂಥಹ ಪ್ರಸಂಗಗಳು ಕಂಡು ಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸುವ ಮೂಲಕ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರು.
ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್, ಮುದ್ದುರಂಗಸ್ವಾಮಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

