ರಾಯಚೂರು

ಜ್ಞಾವದೀವಿಗೆ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್‍ಗಳ ವಿತರಣೆ ಹಿಂದುಳಿದ ಹಣೆಪಟ್ಟಿ ಅಳಿಸಲು ಶಿಕ್ಷಣವೇ ಅಸ್ತ್ರ : ಚಿನ್ನದಗಣಿ ಅದ್ಯಕ್ಷ ವಜ್ಜಲ್

ಲಿಂಗಸುಗೂರು : ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಸರಕಾರದ ಸವಲತ್ತುಗಳ ಜೊತೆಗೆ ಖಾಸಗಿಯಾಗಿ ಬರುವ ಪರಿಕರಗಳನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆಯಲು ಮುಂದಾಗಬೇಕು. ನಮ್ಮ ಹೈದ್ರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ ಎನ್ನುವ ಹಣೆ ಪಟ್ಟಿಯನ್ನು ಅಳಿಸಿಹಾಕಲು ಶಿಕ್ಷಣವೊಂದೇ ಬಹುದೊಡ್ಡ ಅಸ್ತ್ರವಾಗಿದೆ ಎಂದು ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರುಕ
ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್‍ಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ನಡೆದಿರುವ ಜ್ಞಾನದೀವಿ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತವಾಗಿ ಟ್ಯಾಬ್‍ಗಳನ್ನು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೈದ್ರಾಬಾದ್-ಕರ್ನಾಟಕ ಪ್ರದೇಶ ಶೈಕ್ಷಣಿಕವಾಗಿ ಹಿಂದುಳಿದಿದೆ ಎನ್ನುವ ಹಣೆಪಟ್ಟಿಯನ್ನು ಬದಲಿಸಲು ಸರಕಾರದೊಂದಿಗೆ ಉಳ್ಳವರು ಸಹಕಾರ ನೀಡುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಶಿಕ್ಷಣದ ಅಭಿವೃದ್ಧಿಗೆ ಯಾವತ್ತೂ ಸಹಾಯ-ಸಹಕಾರ ನೀಡಲು ಕೈಜೋಡಿಸುತ್ತೇನೆಂದು ವಜ್ಜಲ್ ಭರವಸೆ ನೀಡಿದರು.
ಸರಕಾರಿ ಪ್ರೌಢಶಾಲೆ ನಿಲೋಗಲ್ ಕ್ರಾಸ್, ಸರಕಾರಿ ಪ್ರೌಢಶಾಲೆ ಲಿಂಗಸುಗೂರು ಪಟ್ಟಣದ, ಸರಕಾರಿ ಪ್ರೌಢಶಾಲೆ ಪೂಲಭಾವಿ, ಸರಕಾರಿ ಪ್ರೌಢಶಾಲೆ ಚಿಕ್ಕಹೆಸರೂರು, ಸರಕಾರಿ ಪ್ರೌಢಶಾಲೆ ಕಾಚಾಪೂರ, ಸರಕಾರಿ ಪ್ರೌಢಶಾಲೆ ಹೂನೂರು, ಸರಕಾರಿ ಪ್ರೌಢಶಾಲೆ ಮಾಕಾಪೂರ ಸೇರಿ ತಾಲೂಕಿನ 7 ಪ್ರೌಢಶಾಲೆಗಳ 257 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ವಜ್ಜಲ್ ಟ್ಯಾಬ್‍ಗಳನ್ನು ವಿತರಣೆ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್, ಬಿಜೆಪಿ ಅದ್ಯಕ್ಷ ವೀರನಗೌಡ ಲೆಕ್ಕಿಹಾಳ, ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಹನುಮಂತಪ್ಪ ಕುಳಗೇರಿ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ಮುರಳೀಧರ ಕುಲಕರ್ಣಿ ಸೇರಿ ಇತರರು ಸಮಾರಂಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!