ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆಯೇ ನಮ್ಮ ಗೆಲುವಿಗೆ ರಹದಾರಿ : ಸಚಿವ ಈಶ್ವರಪ್ಪ
ಲಿಂಗಸೂಗೂರು : ನಳಿನ್‍ಕುಮಾರರ ನೇತೃತ್ವದಲ್ಲಿ ಪಕ್ಷ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಸರಕಾರ ಸುಭದ್ರವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಎಲ್ಲಾ ಕಡೆಗಳಲ್ಲೂ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆಯೇ ನಮ್ಮ ಗೆಲುವಿಗೆ
ರಹದಾರಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ವ್ಯಕ್ತಪಡಿಸಿದರು.
ಸ್ಥಳೀಯ ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ
ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿನ ಬಣ ರಾಜಕೀಯ,ಗುಂಪುಗಾರಿಕೆಯೇ ನಮ್ಮ ಗೆಲುವಿಗೆ
ಅನುಕೂಲ ಮಾಡಲಿವೆ. ಜನಪರವಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವನ್ನು ಉಪ ಚುನಾವಣೆಯಲ್ಲಿ ಮತದಾರ ಆಶೀರ್ವದಿಸುತ್ತಾನೆಂದರು.
ಕುಡಿಯುವ ನೀರಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಸಚಿವರು, ರಾಜ್ಯದಲ್ಲಿ ಮೂರು ವರ್ಷಗಳಿಂದ ಬರಗಾಲ ಇದ್ದ ಭಾಗಕ್ಕೆ 50 ಲಕ್ಷ ರೂಪಾಯಿ, ಎರಡು ವರ್ಷಗಳಿಂದ ಬರಗಾಲ ಇರುವ ಕಡೆಗಳಲ್ಲಿ 35 ಲಕ್ಷ ರೂಪಾಯಿ, ಒಂದು ವರ್ಷದ ಬರಗಾಲ ಇದ್ದ ಕಡೆ 25 ಲಕ್ಷ ರೂಪಾಯಿ ಆಯಾ ಟಾಸ್ಕ್‍ಫೋರ್ಸ್ ಸಮಿತಿಯ ಶಿಫಾರಸ್ಸಿನ ಮೇರೆಗೆ ಹಣ ಬಿಡುಗಡೆ ಮಾಡುತ್ತಿದ್ದೇವೆ. ನೀರಿನ ಲಭ್ಯತೆ ಇರದ ಕಡೆಗಳಲ್ಲಿ ಟ್ಯಾಂಕರ್ ಮೂಲಕ
ನೀರಿನ ಸರಬರಾಜು ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನ ನೀಡಲಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ
ಕ್ರಮ ಕೈಗೊಳ್ಳಲಾಗುವುದು ಎಂದರು.
ಶುದ್ಧ ಕುಡಿಯುವ ನೀರಿನ ಘಟಕ (ಆರ್‍ಓ ಪ್ಲಾಂಟ್‍ಗಳ)ಗಳ
ಸಮಸ್ಯೆ ರಾಜ್ಯದಲ್ಲಿರುವುದು ಗಮನಕ್ಕೆ ಬಂದದೆ. ಇದರ ಪರಿಶೀಲನೆಗಾಗಿ ಜಂಟಿ ಸದಸ ಸಮಿತಿಯನ್ನು ನೇಮಕ ಮಾಡಲಾಗಿದೆ. ಸಮಿತಿಯ ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದೆಂದರು ಹೇಳಿದರು.
ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್, ಜಿ.ಪಂ. ಅದ್ಯಕ್ಷೆ
ವೀರಲಕ್ಷ್ಮಿ ಆದಿಮನಿ, ಕಾಡಾ ಅದ್ಯಕ್ಷ ಶರಣಪ್ಪ ತಳವಾರ, ಮುಖಂಡ
ಗಿರಿಮಲ್ಲನಗೌಡ ಸೇರಿ ಇತರರು ಇದ್ದರು.

