ರಾಯಚೂರು

ಲಿಂಗಸುಗೂರಲ್ಲಿ ಸಾರ್ವಜನಿಕ ರಸ್ತೆ ಕಳುವು..! ಹುಡುಕಿಕೊಡಲು ಕರವೇ ಆಗ್ರಹ..!

ಲಿಂಗಸುಗೂರು : ಪಟ್ಟಣದ ಬಸ್ಟಾಂಡ್ ಪಕ್ಕದಲ್ಲಿರುವ ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ (ಕಳುವು) ಮಾಡಿದ್ದು ಹುಡುಕಿಕೊಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.


ಶಿರಸ್ತೆದಾರ ಶಾಲಂಸಾಬರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಸ್ಥಳೀಯ ಹೊಸ ಬಸ್ಟಾಂಡ್ ಹಿಂದುಗಡೆ 1988ರಲ್ಲಿ ಸರಸ್ವತಮ್ಮ ದೇವೇಂದ್ರಪ್ಪ ಎನ್ನುವವರ ಹೆಸರಲ್ಲಿರುವ ಜಮೀನನ್ನು ಎನ್.ಎ. ಮಾಡಲಾಗಿದ್ದು, ಮೂಲ ನಕ್ಷೆಯಲ್ಲಿರುವ 20 ಅಡಿಯ ರಸ್ತೆ ಹಾಗೂ ಎರಡು ಒಳ ರಸ್ತೆಗಳನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇರುವ ಒಂದೇ ರಸ್ತೆ ಇಕ್ಕಟ್ಟಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒತ್ತುವರಿಯಾಗಿರುವ ರಸ್ತೆಗಳನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿಸಬೇಕು. 15 ದಿನಗಳಲ್ಲಿ ಕ್ರಮಕ್ಕೆ ಮುಂದಾಗದೇ ಇದ್ದಲ್ಲಿ, ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.


ಕರವೇ ಅದ್ಯಕ್ಷ ಜಿಲಾನಿಪಾಷಾ, ಉಪಾದ್ಯಕ್ಷ ಚಂದ್ರು ನಾಯಕ, ಪ್ರದಾನ ಕಾರ್ಯದರ್ಶಿ ಶಿವರಾಜ ನಾಯ್ಕ, ನಗರ ಘಟಕ ಅದ್ಯಕ್ಷ ಹನುಮಂತ ನಾಯಕ, ರವಿಬರಗೂಡಿ, ಜಮೀರ್‍ಖಾನ್, ಅಮರೇಶಸ್ವಾಮಿ, ಹನುಮಂತ ಭಜಂತ್ರಿ, ಅಲ್ಲಾವುದ್ದೀನ್ ಬಾಬಾ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!