ಲಿಂಗಸುಗೂರು : ಶ್ರೀನಾಗಾ ಪಬ್ಲಿಕ್ ಶಾಲೆಯಲ್ಲಿ ಸ್ವತಂತ್ರೋತ್ಸವ ದಿನಾಚರಣೆ
ಲಿಂಗಸುಗೂರು : ಪಟ್ಟಣದ ಶ್ರೀನಾಗಾ ಪಬ್ಲಿಕ್ ಆಂಗ್ಲ ಮಾಧ್ಯಮ
ಶಾಲೆಯಲ್ಲಿ 75ನೇ ಸ್ವತಂತ್ರ ಸಂಭ್ರಾಚರಣೆ ಪ್ರಯುಕ್ತ ಬಿಜೆಪಿ
ಯುವ ಮುಖಂಡ ಸಿದ್ಧರಾಮೇಶ್ವರ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಕೋವಿಡ್ ಮಹಾಮಾರಿ ಆದಷ್ಟು ಶೀಘ್ರ ತೊಲಗಿ ಮೊದಲಿನಂತೆ
ಶಾಲೆಗಳು ಆರಂಭವಾಗಲಿ, ಮಕ್ಕಳು ಶಾಲೆಗೆ ಬಂದು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತಾಗಲೆಂದು ಸಿದ್ಧರಾಮೇಶ್ವರ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್, ಮುಖಂಡರಾದ
ಕರಿಯಪ್ಪ ವಜ್ಜಲ್, ಗಿರಿಮಲ್ಲನಗೌಡ, ವೆಂಕನಗೌಡ ಐದನಾಳ, ಅಬ್ದುಲ್ಲಾ ಬೇಕರಿ, ಅಮರೇಶ ಮಡ್ಡಿ, ಶಿವಕುಮಾರ, ಗದ್ದೆಪ್ಪ ಭೋವಿ ಸೇರಿ ಶಾಲೆಯ ಶಿಕ್ಷಕರು ಹಾಗೂ ಕೆಲ ಮಕ್ಕಳು ಈ ಸಂದರ್ಭದಲ್ಲಿ ಇದ್ದರು.

