ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ದಸಂಸ ಒತ್ತಾಯ
ಲಿಂಗಸುಗೂರು : ಪಟ್ಟಣದ ಪ್ರಮುಖ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‍ಅವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕೆಂದು ದಲಿತ ಸಂರಕ್ಷ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.
ಸ್ಥಳೀಯ ಕ್ರೀಡಾಂಗಣದಲ್ಲಿ ಶಾಸಕ ಡಿ.ಎಸ್.ಹೂಲಗೇರಿಯವರಿಗೆ
ಮನವಿ ಸಲ್ಲಿಸಿದ ಅವರು, ಲಿಂಗಸುಗೂರು ಪಟ್ಟಣದ ಪ್ರಮುಖ ಸ್ಥಳದಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರ ಮುಂದಾಗಬೇಕು. ಹೊಸದಾಗಿ ಪಟ್ಟಣದಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಮನವಿಯನ್ನು ಆಲಿಸಿದ ಶಾಸಕರು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು. ಮೂರ್ತಿ ಪ್ರತಿಷ್ಠಾಪನೆಯನ್ನು ಸರಕಾರ ಸಧ್ಯಕ್ಕೆ ಸ್ಥಗಿತಗೊಳಿಸಿದೆ. ಅಲ್ಲದೇ,ಹೊಸದಾಗಿ ನಾಮಕರಣ ಮಾಡಲು ನನ್ನೊಬ್ಬನಿಗೆ ಬರುವುದಿಲ್ಲ ಜಿಲ್ಲಾ ಉಸ್ತುವಾರಿ ಸಚಿವ,ಜಿಲ್ಲಾಧಿಕಾರಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ದಸಂಸ ತಾಲೂಕು ಅದ್ಯಕ್ಷ ಮೋಹನ ಗೋಸ್ಲೆ ಕರಡಕಲ್,
ಉಪಾದ್ಯಕ್ಷ ರಮೇಶ ಮ್ಯಾಗಳಮನಿ, ಚಿದಾನಂದ ಚಲುವಾದಿ, ನಾಗರಾಜ ಯರಡೋಣ, ಮೌನೇಶ ಮ್ಯಾಗಟಿ, ಅನಿಲಕುಮಾರ, ಖಾಲಿದ್ ಚಾವೂಸ್,ಕುಪ್ಪಣ್ಣ ಹೊಸಮನಿ, ಅರುಣ ಚಿಕ್ಕೆಸರೂರು ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

