ಲಿಂಗಸುಗೂರು : ನಿವೃತ್ತ ವೈದ್ಯ ಲಕ್ಷ್ಮಪ್ಪರಿಗೆ ಗೌರವ ಸನ್ಮಾನ
ಲಿಂಗಸುಗೂರು : ಮೂರು ದಶಕಗಳ ಕಾಲ ಆರೋಗ್ಯ
ಇಲಾಖೆಯಲ್ಲಿ ನಿರಂತರವಾಗಿ ಜನರ ಸೇವೆಗೈದು ಸರಕಾರಿ
ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಲಕ್ಷ್ಮಪ್ಪ ಇತ್ತೀಚೆಗೆ
ವಯೋನಿವೃತ್ತರಾಗಿರುವ ಪ್ರಯಕ್ತ ಅವರ ಸೇವೆಗೆ
ಗೌರವಯುತವಾಗಿ ರಾಯಚೂರು ಜಿಲ್ಲಾ ಮಾದಿಗ ನೌಕರರ
ಕ್ಷೇಮಾಭಿವೃದ್ಧಿ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸತತ ಜನಸೇವೆ ಮಾಡುವ ಮೂಲಕ ಸರಳ
ವ್ಯಕ್ತಿತ್ವವನ್ನು ರೂಢಿಸಿಕೊಂಡು ಬಂದಿರುವ ವೈದ್ಯಾಧಿಕಾರಿಗಳ
ಸೇವೆ ಸಮಾಜಕ್ಕೆ ಇನ್ನಷ್ಟು ಬೇಕಿದೆ. ಸಂಕಷ್ಟದ ಕಾಲದಲ್ಲಿ
ವೈದ್ಯರು ಯಾವುದೇ ಹಿಂಜರಿಕೆ ಇಲ್ಲದೇ ಜನಸೇವೆಗೈದಿರುವುದು ಶ್ಲಾಘನೀಯ. ಇವರ ಆದರ್ಶಯುವ ಸೇವಾ ಬದುಕು ಯುವ ಪೀಳಿಗೆಯ ವೈದ್ಯರುಗಳಿಗೆ ದಾರಿದೀಪವಾಗಿದೆ ಎಂದು ಸಂಘದ
ತಾಲೂಕು ಅದ್ಯಕ್ಷ ಜೆ.ಎಸ್.ಗೋವಿಂದರೆಡ್ಡಿ ಮಾತನಾಡಿದರು.
ಮುಖಂಡರಾದ ಡಿ.ಬಿ.ಸೋಮನಮರಡಿ, ಗ್ಯಾನಪ್ಪ, ಸಂಘಟನೆ ಪ್ರಧಾನ ಕಾರ್ಯದರ್ಶಿ ಹುಸೇನಪ್ಪ ಮುಂಡರಗಿ, ಭೀಮಣ್ಣ ಸಂಗೇಪಾಗ್, ಶಿವರಾಜ ಕಟ್ಟಿಮನಿ, ರಂಗಣ್ಣ ದೇವರಮನಿ, ಬಸವರಾಜ ಕೆ.ಇ.ಬಿ. ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

