ಈಚನಾಳ ಗ್ರಾಮಕ್ಕೆ ಇಓ ಭೇಟಿ, ಪರಿಶೀಲನೆ : ಸ್ವಚ್ಛತೆಗೆ ತಾಕೀತು
ಲಿಂಗಸುಗೂರು : ತಾಲೂಕಿನ ಈಚನಾಳ ಗ್ರಾಮಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ ಮಂಗಳವಾರ ಭೇಟಿ ನೀಡಿ ಪರಿಸ್ಥಿಯನ್ನು ಪರಿಶೀಲನೆ ಮಾಡಿದರು. ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ಸ್ವಚ್ಛತೆಗೆ ಆಧ್ಯತೆ ನೀಡುವಂತೆ ಸ್ಥಳದಲ್ಲಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ತಾಕೀತು ಮಾಡಿದರು.
ಪರಿಶಿಷ್ಟ ಕಾಲೋನಿಗಳಲ್ಲಿ ಹದಗೆಟ್ಟಿರು ಚರಂಡಿ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಸರಿಪಡಿಸಬೇಕು. ಪಂಚಾಯತ್‍ನಲ್ಲಿರುವ ಸಿಸಿ ಕ್ಯಾಮೆರಾಗಳ ದುರಸ್ತಿ, ಬಯೋಮೆಟ್ರಿಕ್ ವ್ಯವಸ್ಥೆ, ಕಂಪ್ಯೂಟರ್ ಸೇವೆ ಸೇರಿ ಇತರೆ ಅಗತ್ಯ ಸೇವೆಗಳನ್ನು ಸಾರ್ವಜನಿಕರಿಗೆ ನೀಡುವಂತೆ ಪಿಡಿಓ ಖಾಜಾಬೇಗಂಅವರಿಗೆ ಸೂಚನೆ ನೀಡಿದರು.
ಪಂಚಾಯತ್ ಅದ್ಯಕ್ಷ ಆದಪ್ಪ ಮೇಟಿ, ಮುಖಂಡರಾದ ಖಾಜಾವಲಿ ಹವಾಲ್ದಾರ್, ಶರಣಬಸವ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

