ಅವಿಭಾಗೀಕೃತ

ನರೇಗಾ : ಸ್ಥಳೀಯ ಚಿತ್ರಕಲಾವಿದರಿಗೆ ಕೆಲಸ ಕೊಡಲು ಒತ್ತಾಯ

ಲಿಂಗಸುಗೂರು : ನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ನಾಗರಿಕ ಮಾಹಿತಿ ಫಲಕಗಳ ಚಿತ್ರ ಮತ್ತು ಬರವಣಿಗೆಯ ಕೆಲಸವನ್ನು ಸ್ಥಳೀಯ ಚಿತ್ರಕಲಾವಿದರಿಗೆ ಕೊಡುವಂತೆ ತಾಲೂಕು ಚಿತ್ರಕಲಾವಿದರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.


ತಾಲೂಕು ಪಂಚಾಯತ್ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಲಾಕ್‍ಡೌನ್ ಪರಿಣಾಮ ಸುಮಾರು ಎರಡು ವರ್ಷಗಳಿಂದ ಕೆಲಸವಿಲ್ಲದೇ ಚಿತ್ರಕಲಾವಿದರ ಬದುಕು ದುಸ್ತರವಾಗಿದೆ. ಚಿತ್ರಕಲಾವಿದರಿಗೆ ಪೋಷಣೆ ಮಾಡಬೇಕಾದ ಆಡಳಿತ ಕಡೆಗಣಿಸುತ್ತಿರುವುದು ದುರಂತವೇ ಸರಿ. ಕೆಲ ಅಧಿಕಾರಿಗಳು ದುಡ್ಡಿನಾಸೆಗೆ ಆಂದ್ರ ಮೂಲದವರಿಗೆ ಕೆಲಸ ಕೊಡುತ್ತಿರುವುದು ಖಂಡನೀಯ. ಕೂಡಲೇ ಪಂಚಾಯತ್ ಮಟ್ಟದಲ್ಲಿರುವ ಸ್ಥಳೀಯ ಚಿತ್ರ ಕಲಾವಿದರಿಗೆ ನರೇಗಾ ಚಿತ್ರಪಟ, ನಾಮಫಲಕ ಬರೆಯುವ ಕೆಲಸ ನೀಡವ ಮೂಲಕ ಅತಂತ್ರ ಪರಿಸ್ಥಿತಿಯಲ್ಲಿರುವ ಕಲಾವಿದರ ಜೀವನೋಪಾಯಕ್ಕೆ ಸರಕಾರ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಬರುವ 21 ದಿನಗಳೊಳಗೆ ಮನವಿಗೆ ಸ್ಪಂಧನೆ ದೊರೆಯದೇ ಇದ್ದಲ್ಲಿ ತಾಲೂಕು ಪಂಚಾಯತ್ ಕಚೇರಿ ಮುಂದೆ ಧರಣಿ ಕೂಡುವುದಾಗಿ ಚಿತ್ರಕಲಾವಿದರು ಎಚ್ಚರಿಕೆ ನೀಡಿದ್ದಾರೆ.


ಸಂಘದ ಅದ್ಯಕ್ಷ ರಶೀದ್ ಜಮಾದಾರ್, ಉಪಾದ್ಯಕ್ಷ ಅಂಬರೀಶ್, ಕಾರ್ಯದರ್ಶಿ ಅಮರೇಶ ಕರಡಕಲ್, ಸಂಘಟನಾ ಕಾರ್ಯದರ್ಶಿ ಬಿ.ಆರ್.ಪಾಟೀಲ್, ಮಹೇಶ ಹೊನಕೇರಿ, ಸಿದ್ದಾರ್ಥ ಕರಡಕಲ್, ಮಹೆಬೂಬ, ಇಸ್ಮಾಯಿಲ್, ಮಹೇಂದ್ರಸಿಂಗ್, ಶರಣಪ್ಪ ಕುಪ್ಪಿಗುಡ್ಡ, ನಾಗರಾಜ, ಪ್ರೇಮಜೀವಿ, ಅನಿಸ್ ಗುರುಗುಂಟ, ಗೋಪಾಲ ಗೌಡೂರು ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!