ಕಾರ್ಪೊರೇಟ್ ಕಂಪನಿಗಳಿಗೆ ದೇಶ ಮಾರುವ ಹುನ್ನಾರ : ಕೋಡಿಹಳ್ಳಿ
ಲಿಂಗಸುಗೂರು : ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರೈತರ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ರೈಲು, ವಿಮಾನ ನಿಲ್ದಾಣ, ಬಂದರು, ವಿದ್ಯುತ್, ಕೃಷಿ ಸೇರಿ ಹಲವು ಸಾರ್ವಜನಿಕರ ವಲಯಗಳನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಮಾರುವ ಹುನ್ನಾರ ನಡೆಸಿದ್ದಾರೆಂದು ರಾಜ್ಯ ರೈತ ಸಂಘದ ಅದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.
ಸ್ಥಳೀಯ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಇದ್ದಾಗ ಜಿಎಸ್‍ಟಿ, ಕೃಷಿ ಕಾಯ್ದೆಗಳು, ಗೋಹತ್ಯೆ ಎಲ್ಲಾ ವಲಯ ಖಾಸಗೀಕರಣದ ಪ್ಯಾನ್ ಆಗಿತ್ತು. ಆದರೆ, ಅವರು ಮಾಡದೇ ಇರುವ ಕಾರಣ ಬಿಜೆಪಿ ಸರಕಾರ ಅವುಗಳನ್ನು ಜಾರಿಗೊಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಗೆ ಯಾವ ಆರ್ಥಿಕತೆ ವ್ಯವಸ್ಥೆ ಗೊತ್ತಿಲ್ಲ ಸುಳ್ಳು ಮಾತುಗಳು, ಭಾಷಣ ಮಾಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಾರುವಾರು ಹತ್ಯೆ ಕಾನೂನು ರದ್ದುಗೊಳಿಸಬೇಕು. ಲಿಂಗಸುಗೂರಿನಲ್ಲಿ ರೈತರ ಮೇಲೆ ದಾಖಲಾಗಿರುವ ಕೇಸು ವಾಪಸ್ಸು ಪಡೆಯಬೇಕು. ಈ ಬೇಡಿಕೆಗಳ ಈಡೇರಿಕೆಗೆ 15 ದಿನಗಳವರೆಗೆ ಅವಕಾಶ ನೀಡಲಾಗುವುದು. ಸರಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತಹ ರೈತ ಸಂಘಟನೆಯಿಂದ ಜಾನುವಾರು ಹತ್ಯೆ ನಿಷೇದ ಕಾಯ್ದೆ ಪ್ರತಿಯನ್ನು ಹರಿದು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘಟನೆ ಅದ್ಯಕ್ಷ ಶಿವಪುತ್ರಗೌಡ, ಜಿಲ್ಲಾಧ್ಯಕ್ಷೆ ರೂಪಾ ನಾಯಕ, ಮುಖಂಡರಾದ ಬೈರೆಗೌಡ, ಜಿ.ಕಾರ್ತಿಕ್, ಬಸವಂತಪ್ಪ, ಶರಣಪ್ಪ, ಬಸವರಾಜ ಗೋಡಿಹಾಳ, ಬಸವರಾಜಪ್ಪ, ಹನುಮಂತಪ್ಪ, ಕುಪ್ಪಣ್ಣ ಮಾಣಿಕ್ಯ, ಚೇತನ, ಚಂದ್ರಶೇಖರ ದೇಶಮುಖಿ, ಸಂಗನಗೌಡ, ಸದಾನಂದ, ಲಕ್ಷ್ಮಣ ನಾಗರಹಾಳ ಸೇರಿದಂತೆ ಹಲವರು ಇದ್ದರು.

