ಬಿಜೆಪಿ ಅದ್ಯಕ್ಷ ವೀರನಗೌಡರಿಗೆ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡರ ಕಿವಿಮಾತು ‘ಕ್ಷೇತ್ರದ ಅಬಿವೃದ್ಧಿಗೆ ಸಹಕಾರ ನೀಡಿ, ಅನುಭವದ ಕೊರತೆ ನಿಮ್ಮಲ್ಲಿದೆ’
ಲಿಂಗಸುಗೂರು : ಯಾವುದೇ ಚುನಾವಣೆಗೆ ನಿಂತು ಸ್ಪರ್ಧಿಸಿಲ್ಲ, ರಾಜಕೀಯರ ಅನುಭವ ಮೊದಲೇ ಇಲ್ಲ. ಇತ್ತೀಚೆಗೆ ರಾಜಕೀಯದಲ್ಲಿ ಕಣ್ಣುಬಿಡುತ್ತಿರುವ ಬಿಜೆಪಿ ಮಂಡಲ ಅದ್ಯಕ್ಷ ವೀರನಗೌಡ ಲೆಕ್ಕಿಹಾಳರು ಬೆದರಿಕೆಯ ಮಾತುಗಳನ್ನಾಡುವುದು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಕರಡಕಲ್ ಹೇಳಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರ ಬಗ್ಗೆ ಹಗುರವಾದ ಪದಗಳನ್ನು ಬಳಸುವುದು ಬಿಜೆಪಿ ಅದ್ಯಕ್ಷರಿಗೆ ಶೋಭೆ ತರುವುದಿಲ್ಲ.
ಯಾವುದೇ ಸರಕಾರಿ ಕಾಮಗಾರಿಗಳ ಭೂಮಿಪೂಜೆ ಇದ್ದರೂ, ಸಂಬಂಧಿಸಿದ ಅಧಿಕಾರಿಗಳೇ ಮಾಹಿತಿ ನೀಡಬೇಕೇ ಹೊರತು ಶಾಸಕರು ಮಾಹಿತಿ ನೀಡುವುದಿಲ್ಲ. ಹಟ್ಟಿ ಬಳಿಯ ಚಿಂಚರಕಿ ರಸ್ತೆ ಕಾಮಗಾರಿ ಭೂಮಿಪೂಜೆ ವೇಳೆ ಬಿಜೆಪಿಯ ಕೆಲ ಮುಖಂಡರು ಗೂಂಡಾ ವರ್ತನೆ ತೋರುವ ಮೂಲಕ ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸಿರುವುದು ಅಕ್ಷಮ್ಯ. ಶಾಸಕರ ಜೊತೆಗೆ ಮೂವತ್ತು ವರ್ಷ ರಾಜಕಾರಣ ಮಾಡಿದ ಹಿರಿಯರು ಇದ್ದೆವು. ಆದರೆ, ವೀರನಗೌಡರು ಅದನ್ನು ಅರಿಯದೇ ಪಟಾಲಂ ಎನ್ನುವ ಶಬ್ದ ಬಳಸುವ ಮೂಲಕ ಕೀಳು ಮಾತುಗಳನ್ನಾಡಿರುವುದು ಖಂಡನೀಯ.
ಮಾತಿನ ಭರದಲ್ಲಿ ನಮ್ಮ ಶಾಸಕರು ಒಂದೆರಡು ಮಾತುಗಳನ್ನು ಆಡಿರಬಹುದು, ಇದು ಕೇವಲ ರಾಜಕಾರಣ. ಇಲ್ಲಿ ಯಾವುದೇ ವಯಕ್ತಿಕ ಇರುವುದಿಲ್ಲ. ಇದನ್ನು ಅರಿತು ವೀರನಗೌಡರು ಮುನ್ನಡೆಯಬೇಕು. ಅವರಿಗೆ ಇನ್ನೂ ರಾಜಕೀಯ ಅನುಭವದ ಕೊರತೆ ಇದೆ. ಈಗಾಗಲೇ ಎರಡ್ಮೂರು ಬಾರಿ ಅವರಿಗೆ ತಿಳಿ ಹೇಳಿದ್ದರೂ ಅವರು ಸ್ವಭಾವವನ್ನು ತಿದ್ದಿಕೊಳ್ಳುತ್ತಿಲ್ಲ. ಬಿಜೆಪಿ ಮುಖಂಡರು ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುವ ಸಂಸ್ಕøತಿ ಬೆಳೆಸಿಕೊಳ್ಳುತ್ತಿದ್ದಾರೆಯೇ? ಶಾಸಕರ ಬಗ್ಗೆ ಬೆದರಿಕೆ ಮಾತುಗಳನ್ನಾಡಿರುವುದು ಖಂಡನೀಯ. ಇದಕ್ಕೆಲ್ಲಾ ಕಾಂಗ್ರೆಸ್ ಬೆದರುವುದಿಲ್ಲ. ಇದನ್ನು ಇಲ್ಲಿಗೇ ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವ ಮೂಲಕ ಸಜ್ಜನ ರಾಜಕಾರಣಿ ಎನಿಸಿಕೊಳ್ಳಬೇಕೆಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಪಾಮಯ್ಯ ಮುರಾರಿ, ಪರಶುರಾಮ ನಗನೂರು ಈ ಸಂದರ್ಭದಲ್ಲಿ ಇದ್ದರು.

