ರಾಯಚೂರು

ತಾ.ಪಂ. ಜಿ.ಪಂ. ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಮಾತು

ತಾ.ಪಂ. ಜಿ.ಪಂ. ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಮಾತು


‘ಪಕ್ಷ ಬದಲಿಸುವ ಮಾತು ಕಾಂಗ್ರ್ರೆಸ್
ಕುತಂತ್ರ, ಜನ್ಮ ಇರೋವರೆಗೂ ಬಿಜೆಪಿಯಲ್ಲೇ
ಇರುವೆ’

ಲಿಂಗಸುಗೂರು : ಬಿಜೆಪಿ ಪಕ್ಷವೇ ನನಗೆ ರಾಜಕೀಯ ಜೀವನ ಕೊಟ್ಟ ಪಕ್ಷವಾಗಿದೆ. ಪಕ್ಷ ಬದಲಿಸುವ ಊಹಾಪೋಹದ ಮಾತುಗಳು ಕಾಂಗ್ರೆಸ್ ಪಕ್ಷದ ಕುತಂತ್ರವಾಗಿವೆ. ಜನ್ಮ ಇರೋವರೆಗೂ ನಾ ಬಿಜೆಪಿ ಪಕ್ಷದಲ್ಲೇ ಇರುವೆ. ಇದನ್ನು ಕಾರ್ಯಕರ್ತರು ಮನದಟ್ಟು ಮಾಡಿಕೊಳ್ಳಬೇಕು.ಗಾಳಿ ಮಾತುಗಳಿಗೆ ಕಿವಿಗೊಡದೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.

ಸ್ಥಳೀಯ ವಿಜಯಮಹಾಂತೇಶ್ವರ ಶಾಖಾಮಠದಲ್ಲಿ ತಾಲೂಕು
ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳ ಪೂರ್ವಭಾವಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನನ್ನ ಮಾತೃಪಕ್ಷವಾಗಿದೆ. ಮಧ್ಯದಲ್ಲಿ ಬೇರೆಕಡೆ ಹೋಗಿ ಪೆಟ್ಟುಂಡು ಬಂದಿದ್ದೇನೆ. ಮರಳಿ ಗೂಡಿಗೆ ಬಂದಮೇಲೂ ಮತದಾರರು ಪರಾಜಯದ ರುಚಿ ತೋರಿಸಿದ್ದಾರೆ. ಅದನ್ನೂ ಸಂಯಮದಿಂದ ಸ್ವೀಕರಿಸಿದ್ದೇನೆ.

ಸೋತರೂ ಗೌರವ ಉಳಿಸಿಕೊಳ್ಳುವ ಕೆಲಸ ಮಾಡಿದ್ದೇನೆ. ನಾನಿರುವುದೇ ನಿಮ್ಮಗಳ ಸೇವೆಗಾಗಿ. ಭಗವಂತ ನನಗೇನೂ ಕಡಿಮೆ ಮಾಡಿಲ್ಲ. ಆದರೆ,ನನ್ನನ್ನು ನಂಬಿಕೊಂಡಿರುವ, ನನ್ನ ಮೇಲೆ ಅಭಿಮಾನ ಇಟ್ಟುಕೊಂಡಿರುವ ಕಾರ್ಯಕರ್ತರ, ಅಭಿಮಾನಿಗಳಿಗಾಗಿ ಕೊನೆ ಉಸಿರು ಇರೋವರೆಗೂ ರಾಜಕೀಯ ಮಾಡುವೆ ಎಂದು ಖಾರವಾಗಿಯೇ ಮಾತನಾಡಿದರು.

ಕ್ಷೇತ್ರದ ಜನರು ಕಳೆದ ಮೂರು ವರ್ಷಗಳಿಂದ ಪಶ್ಚಾತ್ತಾಪದ ಭಾವನೆಯಲ್ಲಿದ್ದಾರೆ. ನಮ್ಮ ಅವಧಿಯಲ್ಲಿ ತಂದ ಕಾಮಗಾರಿಗಳ ನಿರ್ವಹಣೆಯನ್ನೇ ಈಗಿರುವವರಿಗೆ ಮಾಡಲು ಆಗುತ್ತಿಲ್ಲ.ಯಾವ ಇಲಾಖೆಯಿಂದ ಕೆಲಸ ತರಬೇಕು, ಯಾರ ಬಳಿಗೆ ಹೋಗಿ ಅಭಿವೃದ್ಧಿ ವಿಷಯ ಮಾತನಾಡಬೇಕು ಎನ್ನುವ ಕನಿಷ್ಠ ಜ್ಞಾನವೂ ಈಗಿನ ಶಾಸಕರಿಗೆ ಇಲ್ಲದೇ ಇರುವುದು ಕ್ಷೇತ್ರದ ದುರದೃಷ್ಟ ಎಂದರು. ಕ್ಷೇತ್ರದಲ್ಲಿ ರಸ್ತೆ, ಶಿಕ್ಷಣ, ನೀರು, ಆರೋಗ್ಯ, ನಿರುದ್ಯೋಗ ನಿವಾರಣೆ ಸೇರಿ ಹತ್ತಾರು ಕೆಲಸಗಳು ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹಾಕಿ ಬರುವ ದಿನಗಳಲ್ಲಿ ಅನುದಾನಕ್ಕೆ ಪ್ರಯತ್ನಿಸುವೆ ಎಂದರು.

ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ 7 ಜಿಲ್ಲಾ ಪಂಚಾಯಿತಿ
ಕ್ಷೇತ್ರಗಳು, 18 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲೂ ಬಿಜೆಪಿ
ಬಾವುಟ ಹಾರಿಸಲು ತಯ್ಯಾರಿ ನಡೆಸಬೇಕಿದೆ. ಇದಕ್ಕಾಗಿ ಕಾರ್ಯಕರ್ತರು ಸಣ್ಣಪುಟ್ಟ ಮುನಿಸನ್ನು ದೂರ ಮಾಡಿಕೊಂಡು ಒಗ್ಗಟ್ಟಾಗಿ ಪಕ್ಷ ಸೂಚಿಸಿದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು. ಅಥವಾ ಆಯಾ ಕ್ಷೇತ್ರಗಳಲ್ಲಿ ಗ್ರಾಮಸ್ಥರೇ ನಿರ್ಧರಿಸಿ ಒಮ್ಮತದ ಉತ್ತಮ, ಗಟ್ಟಿಗ ಅಭ್ಯರ್ಥಿಯನ್ನು ಸೂಚಿಸಿದರೆ ಅವರಿಗೆ ಪಕ್ಷ ಆಧ್ಯತೆ ನೀಡುತ್ತದೆ ಎಂದು ಚುನಾವಣೆಯ ರಣತಂತ್ರವನ್ನು ವಿವರಿಸಿದರು.


ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳು
ಕಾರ್ಯಕರ್ತರ ಮಹತ್ವದ ಚುನಾವಣೆಗಳಾಗಿವೆ. ಸರಕಾರದಿಂದ ಬಂದ ಅನುದಾನವನ್ನು ಪ್ರಾಮಾಣಿಕವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅಭಿವೃದ್ಧಿಯನ್ನು ಕಾಣಬೇಕೆಂದು ವಜ್ಜಲ್ ಹೇಳಿದರು.

ಬಿಜೆಪಿ ಜಿಲ್ಲಾದ್ಯಕ್ಷ ರಮಾನಂದ ಯಾದವ್ ಸಮಾರಂಭವನ್ನು
ಉದ್ಘಾಟಿಸಿದರು. ತಾಲೂಕು ಅದ್ಯಕ್ಷ ವೀರನಗೌಡ ಲೆಕ್ಕಿಹಾಳ ಸ್ವಾಗತಿಸಿದರು.


ಮುಖಂಡರಾದ ನಾಗಪ್ಪ ವಜ್ಜಲ್, ಡಾ.ಶಿವಬಸಪ್ಪ, ಗಿರಿಮಲ್ಲನಗೌಡ,ಗುಂಡಪ್ಪಗೌಡ ಹಟ್ಟಿ, ನಾರಾಯಣಪ್ಪ ರಾಠೋಡ್, ಬಾಬಣ್ಣ ಅನ್ವರಿ, ಸಿಜಿ ಗುರಿಕಾರ,ನರಸಿಂಹ ನಾಯಕ, ಕಂಠೆಪ್ಪಗೌಡ, ಜಯಶ್ರೀ ಸಕ್ರಿ, ಶೋಭಾ ಕಾಟವಾ,ಬಸಮ್ಮ ಯಾದವ್, ಶಂಕರಗೌಡ ಸೇರಿ ಸಾವಿರಾರು ಕಾರ್ಯಕರ್ತರು ಸಮಾರಂಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!