ರಾಯಚೂರು

ಕೋವಿಡ್ ಗಂಭೀರತೆಯನ್ನು ನಿರ್ಲಕ್ಷಿಸುತ್ತಿರುವ ಜನತೆ ನಸುಕಿನಲ್ಲೇ ಫೀಲ್ಡಿಗಿಳಿದ ಆರಕ್ಷಕರು : ರಸ್ತೆಗಿಳಿದ ವಾಹನಗಳಿಗೆ ದಂಡ

ಖಾಜಾಹುಸೇನ್
ಲಿಂಗಸುಗೂರು : ಕೋವಿಡ್ ಎರಡನೇ ಅಲೆಯ ಗಂಭೀರತೆಯನ್ನು ನಿರ್ಲಕ್ಷ್ಯ ಮಾಡುತ್ತಿರುವ ಜನರು ವಿನಾಕಾರಣ ರಸ್ತೆಗಿಳಿಯುತ್ತಿದ್ದು, ಇವರಿಗೆ ಬಿಸಿ ಮುಟ್ಟಿಸಲು ಆರಕ್ಷಕರು ಬುಧವಾರ ನಸುಕಿನಿಂದಲೇ ಫೀಲ್ಡಿಗಿಳಿದು ವಾಹನ ಸವಾರರಿಗೆ ದಂಡ ಹಾಕಿದರು.


ಪಿಎಸ್‍ಐ ಪ್ರಕಾಶರೆಡ್ಡಿ ನೇತೃತ್ವದಲ್ಲಿ ಸ್ಥಳೀಯ ಬಸ್ಟಾಂಡ್ ವೃತ್ತದಲ್ಲಿ ಕಾರ್ಯಾಚಣೆಗಿಳಿದ ಪೋಲಿಸರು ದ್ವಿಚಕ್ರ ವಾಹನಗಳು, ಅಟೋಗಳು, ಕಾರುಗಳು ಸೇರಿ ಕೆಲಸಕ್ಕಿಂತ ಅನಾವಶ್ಯಕವಾಗಿ ಕುಂಟು ನೆಪ ಹೇಳುತ್ತಾ ಬರುವವರೇ ಹೆಚ್ಚಾಗದ್ದರು. ಯಾರ ಮಾತಿಗೂ ಕಿವಿಗೊಡದ ಪೋಲಿಸರು ಮಾತ್ರ ಸೂಕ್ತ ದಾಖಲಾತಿಗಳಿದ್ದವರನ್ನು ಬಿಟ್ಟು ಕಳುಹಿಸಿ, ಅನಾವಶ್ಯಕವಾಗಿ ಓಡಾಡುವವರಿಗೆ ದಂಡದ ಬಿಸಿ ಮುಟ್ಟಿಸಿದರು.


ಪಟ್ಟಣದ ಬಹುತೇಕ ಒಳ ರಸ್ತೆಗಳಿಗೆ ಬ್ಯಾರಿಕೇಡ್‍ಗಳನ್ನು ಹಾಕಿ ವಾಹನಗಳ ಸಂಚಾರಕ್ಕೆ ನಿಶೇಧ ಮಾಡಾಗಿದೆ. ಎತ್ತಲಿಂದ ಬಂದರೂ ಬಸ್ಟಾಂಡ್ ವೃತ್ತದ ಮೂಲಕ ಹಾದು ಹೋಗುವಂತೆ ವ್ಯವಸ್ಥೆ ಮಾಡಿ ವೃತ್ತದಲ್ಲಿ ಪೋಲಿಸರು ಡ್ಯೂಟಿಯಲ್ಲಿ ತೈನಾತಾಗಿದ್ದಾರೆ. ಇದರ ಬಗ್ಗೆ ಅರಿವಿಲ್ಲದ ಹೆಚ್ಚಿನ ಸವಾರರು ಮುಖ್ಯರಸ್ತೆ ಮೂಲಕ ಸಂಚರಿಸಲು ಮುಂದಾಗುತ್ತಾರೆ. ತುರ್ತು ಕೆಲಸದ ನಿಮಿತ್ಯ ಸೂಕ್ತ ದಾಖಲೆಗಳನ್ನು ನೀಡಿದವರು ಪಾರಾಗುತ್ತಾರೆ. ದಾಖಲೆ, ಸಕಾರಣ ಇಲ್ಲದವರು ದಂಡ ಕಟ್ಟುತ್ತಿದ್ದಾರೆ.


ಕೋವಿಡ್ ಎರಡನೇ ಅಲೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೊಂಕು ಹಬ್ಬದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಆಡಳಿತವನ್ನು ಹಗಲಿರುಳು ಕೆಲಸಕ್ಕೆ ಹಚ್ಚಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಆರಕ್ಷಕರು ಬಿಡುವಿಲ್ಲದೇ ಡ್ಯೂಟಿ ಮಾಡುತ್ತಿದ್ದಾರೆ. ಪೋಲಿಸರು ತಮ್ಮ ಸಂಸಾರವನ್ನೂ ಲೆಕ್ಕಿಸದೇ ಸೇವೆಯಲ್ಲಿ ತೊಡಗಿದರೂ, ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳು ಕೇಳಿ ಬರುತ್ತಿವೆ. ಕೆಲ ಭ್ರಷ್ಟ ಅಧಿಕಾರಿಗಳಿಂದ ಕೆಲವು ಸಲ ಇಲಾಖೆಗೆ ಕೆಟ್ಟ ಹೆಸರು ಬರುವುದು ತಪ್ಪುತ್ತಿಲ್ಲ. ಆದಾಗ್ಯೂ, ಎಲ್ಲವನ್ನೂ ಸಹಿಸಿಕೊಂಡು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸರ ಕ್ರಮ ಶ್ಲಾಘನೀಯವಾಗಿದೆ. ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸದೇ ಸುಖಾ ಸುಮ್ಮನೇ ರಸ್ತೆಗಿಳಿಯುತ್ತಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.

Leave a Reply

Your email address will not be published. Required fields are marked *

error: Content is protected !!