ರಾಯಚೂರು

ಲಿಂಸಗುಗೂರು ಲಿಂಗಾಯತ ಮಹಾಸಭಾ ಅದ್ಯಕ್ಷರಾಗಿ ಶಿವಾನಂದ ಐದನಾಳ

ಲಿಂಗಸುಗೂರು : ಜಾಗತಿಕ ಲಿಂಗಾಯತ ಮಹಾಸಭಾ ಸಂಘದ ಲಿಂಗಸುಗೂರು ತಾಲೂಕು ಅದ್ಯಕ್ಷರಾಗಿ ಉದ್ಯಮಿ ಹಾಗೂ ಸಮಾಜಸೇವಕ ಶಿವಾನಂದ ಐದನಾಳ ಅವರು ಆಯ್ಕೆಯಾಗಿದ್ದಾರೆಂದು ಮಹಾಸಭಾದ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಸ್ಥಳೀಯ ವಿವಿ ಸಂಘದ ಬಸವ ಸಭಾಂಗಣದಲ್ಲಿ ಜರುಗಿದ ಪದಾಧಿಕಾರಿಗಲ ಆಯ್ಕೆ ಸಭೆಯಲ್ಲಿ, ಶಿವಾನಂದ ಐದನಾಳ ಅವರನ್ನು ಮಹಾಸಭಾದ ಅದ್ಯಕ್ಷರನ್ನಾಗಿ, ಗಿರಿಮಲ್ಲನಗೌಡ ಕರಡಕಲ್ ಅವರನ್ನು ಗೌರವಾದ್ಯಕ್ಷರನ್ನಾಗಿ, ಜಿಲ್ಲಾ ಕಾರ್ಯದರ್ಶಿಯನ್ನಾಗಿ ಶಿವಪ್ಪ ಸಕ್ರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ
ಹಂಪಣ್ಣ ಅವರುಗಳನ್ನು ಆಯ್ಕೆ ಮಾಡಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಮಾಜದ ಮುಖಂಡರಾದ ಭೂಪನಗೌಡ ಕರಡಕಲ್,ಲಿಂಬೆಣ್ಣ ಕುಂಬಾರ, ಬಸವಂತರಾಯ ಕುರಿ, ಮಲ್ಲಣ್ಣ ನರಕಲದಿನ್ನಿ,ವೀರನಗೌಡ ಪಾಟೀಲ್, ದೊಡ್ಡಪ್ಪ ಸಾಹುಕಾರ, ಸಿದ್ರಾಮಪ್ಪ ಕಾಡ್ಲೂರು,ಚಿದಾನಂದ ಹಡಪದ್, ಜಂಗಮಮೂರ್ತಿ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!