ಕರುನಾಡ ವಿಜಯಸೇನೆ ತಾಲೂಕು ಅದ್ಯಕ್ಷರಾಗಿ ರಮೇಶ ಸುಂಕದ್
ಲಿಂಗಸುಗೂರು : ಕರುನಾಡ ವಿಜಯಸೇನೆ ತಾಲೂಕು ಅದ್ಯಕ್ಷರಾಗಿ ಸಮಾಜ ಸೇವಕ ರಮೇಶ ಸುಂಕದ್ ಅವರನ್ನು ನೇಮಕ ಮಾಡಲಾಗಿದೆ ಎಂದು ವಿಜಯಸೇನೆ ಜಿಲ್ಲಾದ್ಯಕ್ಷ ಎಮ್.ಸಿ.ಚಂದ್ರಶೇಖರ ನಾಯಕ
ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಸಂಘಟನೆಗೆ ನೂತನ
ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಾಯಚೂರು ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಮುತ್ತಣ್ಣ ಗುಡಿಹಾಳ, ಲಿಂಗಸುಗೂರು ತಾಲೂಕು ಅದ್ಯಕ್ಷರನ್ನಾಗಿ ರಮೇಶ ಸುಂಕದ್ ಕರಡಕಲ್,ಉಪಾದ್ಯಕ್ಷರನ್ನಾಗಿ ಸುರೇಶ ಮಡಿವಾಳ, ಕಾನೂನು ಸಲಹೆಗಾರರನ್ನಾಗಿ
ಅಮರೇಶ ಸಿ.ಪಾಟೀಲ್ ಹೊನ್ನಹಳ್ಳಿ, ತಾಲೂಕು ವಕ್ತಾರರಾಗಿ ಶರಣಬಸವ ಹಡಪದ್ ಈಚನಾಳ, ಎಸ್‍ಸಿ-ಎಸ್‍ಟಿ ಘಟಕದ ಅದ್ಯಕ್ಷರನ್ನಾಗಿ ಮಹಾದೇವಪ್ಪ
ಸರ್ಜಾಪೂರ, ಆರೋಗ್ಯ ಘಟಕದ ಅದ್ಯಕ್ಷರನ್ನಾಗಿ ವೈದ್ಯ
ಕುಮಾರಸ್ವಾಮಿ ಕಸಬಾಲಿಂಗಸುಗೂರು ಇವರುಗಳನ್ನು ನೇಮಕ ಮಾಡಲಾಗಿದೆ.
ಸಂಘಟನೆಗೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಸಂಘದ ತತ್ವಸಿದ್ಧಾಂತಗಳಡಿ ನಾಡಿನ ನೆಲ-ಜಲ, ಪರಿಸರ ಸಂರಕ್ಷಣೆ ಜೊತೆ ಜೊತೆಗೆಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕೆಂದು ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರ ಗಾಣದಾಳ ಸೂಚನೆ ನೀಡಲಾಗಿದೆ.

