ಡಾ.ಸುಧಾಮೂರ್ತಿ ಕಲಿಕಾರ್ಥಿ ಸಹಾಯಕೇಂದ್ರ ಆರಂಭ : ಸದ್ಬಳಕೆಗೆ ಕರೆ
ಲಿಂಗಸುಗೂರು : ಸ್ಥಳೀಯ ಡಾ.ಸುಧಾಮೂರ್ತಿ ಇನ್ಫೋ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನ ಅಡಿಯಲ್ಲಿ ಕಲಿಕಾರ್ಥಿ ಸಹಾಯಕೇಂದ್ರವನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಾಲೇಜು ಪ್ರಾಚಾರ್ಯ ಅಮರೇಶ ವೆಂಕಟಾಪೂರ ಕರೆ ನೀಡಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಬುಧವಾರ ನಡೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎ., ಬಿ.ಕಾಂ., ಬಿ.ಲಿಬ್, ಎಂ.ಎ., ಎಂ.ಬಿ.ಎ.,ಎಂ.ಎಸ್.ಸಿ., ಬಿಎಡ್ ಸೇರಿ ಸ್ನಾತಕೋತ್ತರ ಪದವಿ ಪಡೆಯಲು ಅರ್ಜಿಗಳನ್ನು
ಆಹ್ವಾನಿಸಲಾಗಿದೆ. ಪ್ರವೇಶಾತಿಗಳು ಈಗಾಗಲೇ ಆರಂಭಗೊಂಡಿದ್ದು, 12-04-2021 ಕೊನೆಯ ದಿನವಾಗಿದೆ. 200 ರೂಪಾಯಿ ದಂಡಗಳೊಂದಿಗೆ 26-04-2021,400 ರೂಪಾಯಿ ದಂಡ ಪಾವತಿಯೊಂದಿಗೆ 30-04-2021 ರೊಳಗೆ ಶುಲ್ಕ ಪಾವತಿಸಬೇಕು. ಬಿಇಡಿ ಅರ್ಜಿ ಹಾಕಲು 29-03-2021 ಕೊನೆಯ ದಿನವಾಗಿದ್ದು, 04-04-2021ಕ್ಕೆ ಬಿಇಡಿ ಸಿಇಟಿ ಪರೀಕ್ಷೆಗಳು ನಡೆಯುತ್ತವೆ. ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದೆಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ 99860 83390, 97434 99882 ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಮನವಿ ಮಾಡಿದರು.ಸಾನ್ವಿ ಶಿಕ್ಷಣ ಮತ್ತು ಗ್ರಾಮೀಣಭಾವೃದ್ಧಿ ಟ್ರಸ್ಟ್‍ನ ಗೌರವಾದ್ಯಕ್ಷ ಸಂಗಪ್ಪ ಭಾವಿಮನಿ, ಸಂಯೋಜಕ ಯಮನಪ್ಪ ಚಿತ್ತಾಪೂರ, ಶಂಕರ್ ಈಸಂದರ್ಭದಲ್ಲಿ ಇದ್ದರು.

