ಕೋವಿಡ್ ಲಸಿಕೆಗೆ ಒತ್ತಾಯಿಸಿ ಕರವೇ ಪ್ರತಿಭಟನೆ
ಲಿಂಗಸುಗೂರು : 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಲಸಿಕೆ ಹಾಕಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜೂನ್ ಅಂತ್ಯದೊಳಗೆ ಮೊದಲ ಲಸಿಕೆ ಹಾಗೂ ಸೆಪ್ಟಂಬರ್ ಅಂತ್ಯದೊಳಗೆ ಎರಡನೇ ಲಸಿಕೆಯನ್ನು ಪೂರ್ಣಗೊಳಿಸುವ ಮೂಲಕ ದೇಶದಲ್ಲಿ ಕೋವಿಡ್ ಮೂರನೇ ಅಲೆ ಹರಡದಂತೆ ಕಡೆಯಲು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.
ಕರವೇ ಅದ್ಯಕ್ಷ ಜಿಲಾನಿಪಾಷಾ, ಪ್ರಧಾನ ಕಾರ್ಯದರ್ಶಿ ಶಿವರಾಜ ನಾಯಕ್, ಅಜೀಜಪಾಷಾ, ಚಂದ್ರು ನಾಯಕ, ಹನುಮಂತ ನಾಯಕ, ರವಿಕುಮಾರ ಬರಗೂಡಿ, ಭಗೀರಥ ಸರ್ಜಾಪೂರ, ಮಹೆಬೂಬ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

