ರಾಜ್ಯ

ವಿದ್ಯುತ್‌ ದರ ಏರಿಕೆ ಅಮಾನವೀಯ: ವೆಲ್ಫೇರ್ ಪಾರ್ಟಿ

ವಿದ್ಯುತ್‌ ದರ ಏರಿಕೆ ಅಮಾನವೀಯ: ವೆಲ್ಫೇರ್ ಪಾರ್ಟಿ

ಬೆಂಗಳೂರು: ರಾಜ್ಯ ಸರಕಾರದ ವಿದ್ಯುತ್ ದರ ಏರಿಕೆ ಮಾಡಿರವುದನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್ ತೀವ್ರವಾಗಿ ಖಂಡಿಸಿದರು. ಕೂಡಲೇ ದರ ಏರಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದೆ.

ಕೋವಿಡ್ ದಿಂದ ತಮ್ಮ ಉದ್ಯೋಗ, ಗಳಿಕೆ ಕಳೆದುಕೊಂಡುಜನತೆ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ, ಉಪಚುನಾವಣೆ ಬೆನ್ನಲ್ಲೇ ವಿದ್ಯುತ್‌ ದರ ಹೆಚ್ಚಳ ಮಾಡಿರುವುದು ಜನವಿರೋಧಿಕ್ರಮ.ರಾಜ್ಯದ ಬಿಜೆಪಿ ಸರ್ಕಾರ ಜನತೆ ಸಂಕಷ್ಟಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಅಪಾದಿಸಿದರು.

ಜನತೆ ಸಂಕಟ ಕಡಿಮೆ ಮಾಡಲು ಕೆಲಸ ಮಾಡಬೇಕಾದ ಸರ್ಕಾರ ಶ್ರೀಮಂತರ ಪರವಾದ ಕೆಲಸದಲ್ಲಿ ತೊಡಗಿದೆ. ಬಡವರಿಗೆ ವಿದ್ಯುತ್‌ ಸಿಗದಂತೆ ವಿದ್ಯುತ್‌ಕಾಯಿದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಜನತೆ ದುಡ್ಡಿನಲ್ಲಿ ಕಟ್ಟಲಾದ ಸರ್ಕಾರದ ಒಡೆತನದ ವಿದ್ಯುತ್‌ ವ್ಯವಸ್ಥೆಯನ್ನು ಖಾಸಗಿ ಬಂಡವಾಳಗಾರರು ಲಾಭಗಳಿಸಲು ಖಾಸಗೀಕರಣಕ್ಕೆ ಮುಂದಾಗಿದೆ. ಇದು ಖಾಸಗೀಕರಣವಾದರೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ರೈತರಿಗೆ ಉಚಿತ ವಿದ್ಯುತ್‌ ಇಲ್ಲದಂತೆ ಆಗಲಿದೆ ಎಂದು ಹೇಳಿದರು.

ವಿದ್ಯುತ್ ದರ ಏರಿಕೆಯ ಈ ಜನವಿರೋಧಿ ತೀರ್ಮಾನವನ್ನು ಸರಕಾರ ತಕ್ಷಣವೇ ಕೈಬಿಡಬೇಕು ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!