ಲಿಂಗಸುಗೂರು : ಪೆಟ್ರೋಲ್ ಬಂಕ್‍ನಲ್ಲಿ ಗ್ರಾಹಕರಿಗೆ ವಂಚನೆ, ಆರೋಪ
ಲಿಂಗಸುಗೂರು : ಸ್ಥಳೀಯ ಬಸ್ಟಾಂಡ್ ಬಳಿಯ ಸರಸ್ವತಿ ಫಿಲ್ಲಿಂಗ್ ಸ್ಟೇಶನ್‍ನಲ್ಲಿ ಗ್ರಾಹಕರಿಗೆ ಪೆಟ್ರೋಲ್‍ನಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಹಕರು ಬಂಕ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ಘಟನೆ ಬುಧವಾರ ಸಂಜೆ ಜರುಗಿದೆ.
ಕರಡಕಲ್ ಗ್ರಾಮದ ಗ್ರಾಹಕರೊಬ್ಬರು ತಮ್ಮ ದ್ವಿಚಕ್ರ
ವಾಹನಕ್ಕೆ 220 ರೂಪಾಯಿ ಪೆಟ್ರೋಲ್ ಹಾಗೂ 40 ಎಂ.ಎಲ್.ಆಯಿಲ್ ಹಾಕಿಸಿದ್ದಾರೆ.ಪೆಟ್ರೋಲ್ ವಾಹನಕ್ಕೆ ಹಾಕಿಸಿದಾಗ ಅನುಮಾನ ಬಂದ ಗ್ರಾಹಕರು ಕೂಡಲೇ ಎರಡು ಲೀಟರ್ ಬಾಟಲ್‍ನಲ್ಲಿ ಗಾಡಿಯಲ್ಲಿದ್ದ ಪೆಟ್ರೋಲನ್ನು
ಹೊರಗೆ ತೆಗೆದಿದ್ದಾರೆ. ಬೇರೆ ಬಾಟಲ್‍ಒಂದರಲ್ಲಿ ಪೆಟ್ರೋಲ್ ಹಾಕಿಸಲು ಮುಂದಾದಾಗ 212 ರೂಪಾಯಿಗೇ ಬಾಟಲ್ ತುಂಬಿದೆ. ಆಗ ಬಂಕ್ ಸಿಬ್ಬಂಧಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾದರು.
ಮೊದಲೇ 106 ರೂಪಾಯಿಗೆ ಹಚ್ಚಳವಗಿರುವ ಪೆಟ್ರೋಲ್
ಹಾಕಿಸಲು ಗ್ರಾಹಕರು ಹೈರಾಣಾಗುತ್ತಿರುವುದು ಒಂದೆಡೆಯಾದರೆ, ಇತ್ತ ಬಂಕ್‍ಗಳು ನಿರಂತರವಾಗಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಖಂಡನೀಯ. ಪ್ರತಿನಿತ್ಯ ಸಾವಿರಾರು ವಾಹನಗಳಿಗೆ ಇಲ್ಲಿ ಪೆಟ್ರೋಲ್ ಹಾಕಿಸಲಾಗುತ್ತದೆ. ಒಂದೊಂದು ಲೀಟರ್‍ನಲ್ಲಿಯೂ ಪೆಟ್ರೋಲ್ ಕದಿಯುವ ಬಂಕ್‍ನವರ ಮೇಲೆ ಸಂಬಂಧಿಸಿದ ಇಲಾಖೆ ಕ್ರಮಕ್ಕೆ ಮುಂದಾಗಬೇಕೆಂದು ಗ್ರಾಹಕರು ಆಗ್ರಹಿಸಿದರು.

