ಕೇರ್‍ಸೆಂಟರ್‍ನಿಂದ ಪಾಸಿಟಿವ್ ರೋಗಿ ಗುಣಮುಖನಾಗಿ ಡಿಸ್ಚಾರ್ಜ್
ಲಿಂಗಸುಗೂರು : ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆಗಿ ಕಳೆದ ಒಂದು ವಾರದ ಹಿಂದೆ ದಾಖಲಾಗಿದ್ದ ಖೈರವಾಡಗಿ ಗ್ರಾಮದ ಯುವನೋರ್ವ ಸಂಪೂರ್ಣವಾಗಿ ಚೇತರಿಸಿಕೊಂಡ ಪರಿಣಾಮ ಆತನನ್ನು ಭಾನುವಾರ ಮನೆಗೆ ಕಳುಹಿಸಿಕೊಡಲಾಯಿತು.
ಇಲ್ಲಿನ ಕೋವಿಡ್‍ಕೇರ್ ಸೆಂಟರ್‍ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ ನಿರಂತದ ಪರಿಶ್ರಮ ಹಾಗೂ ರೋಗಿಯು ಚಿಕಿತ್ಸೆಗೆ ಸ್ಪಂಧಿಸಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗಿ ಆತನನ್ನು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂಧಿಗಳು ಉಲ್ಲಾಸದಿಂದ ಬೀಳ್ಕೊಟ್ಟರು. ಕೊರೊನಾ ಮಹಾಮಾರಿಯನ್ನು ಗೆದ್ದ ಖುಷಿಯಲ್ಲಿ ಯುವಕ ಸ್ವಗ್ರಾಮಕ್ಕೆ ತೆರಳಿದನು.
ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ಸೇರಿ ವೈದ್ಯರು ಹಾಗೂ ದಾದಿಯರು ಈ ಸಂದರ್ಭದಲ್ಲಿ ಇದ್ದರು.

