ಬೋಯಿಂಗ್ ಸಂಸ್ಥೆಯ ಕೋವಿಡ್ ಆಸ್ಪತ್ರೆಯನ್ನು ಜಿಲ್ಲೆಯಲ್ಲೆ ಸ್ಥಾಪಿಸಬೇಕು – ಶಿವಕುಮಾರ ಮ್ಯಾಗಳಮನಿ
ರಾಯಚೂರು : ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದೆ. ಇದಕ್ಕೆ ಹಿಂದೆ ಮತ್ತು ಈಗ ಕೋವಿಡ್ ವಿಚಾರದಲ್ಲಿ ಜಿಲ್ಲೆಯ ಜನತೆ ಅನುಭವಿಸುತ್ತಿರುವ ಸಾವು, ನೋವುಗಳೆ ಸಾಕ್ಷಿ. ಜಿಲ್ಲೆಯಲ್ಲಿ ರೀಮ್ಸ್, ನವೋದಯ ಮೆಡಿಕಲ್ ಕಾಲೇಜು, ಒಪೆಕ್ ಆಸ್ಪತ್ರೆಯನ್ನು ಹೊರತುಪಡಿಸಿದರೆ ಬೇರೆ ಯಾವ ದೊಡ್ಡ ಪ್ರಮಾಣದ ಹೈಟೆಕ್ ಆಸ್ಪತ್ರೆಗಳು ರಾಯಚೂರು ಜಿಲ್ಲೆಯಲ್ಲಿ ಇಲ್ಲ, ಜಿಲ್ಲೆಯ ಜನತೆಯಲ್ಲಿ ಶೇಕಡಾವಾರು ಜನ ರೈತರು, ಕೂಲಿಕಾರರು, ಗ್ರಾಮೀಣ ನಿವಾಸಿಗಳು, ದಿನಗೂಲಿ ನೌಕರರು ಆಗಿದ್ದಾರೆ ಅಲ್ಲದೆ ಇಲ್ಲಿನ ಭೌಗೋಳಿಕತೆ ಹಾಗೂ ಜನಸಂಖ್ಯೆ, ತಾಲ್ಲೂಕುಗಳ ಸಂಖ್ಯೆ ಎಲ್ಲವನ್ನೂ ಗಮನಿಸಿದರೆ ಜಿಲ್ಲೆಗೆ ಅಮೆರಿಕಾ ಮೂಲದ ಕೋವಿಡ್ ಗೆ ಸಂಬಂಧಿಸಿದ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಬೋಯಿಂಗ್ ಸಂಸ್ಥೆಯ ಕೋವಿಡ್ ಕೇರ್ ಆಸ್ಪತ್ರೆಯ ಆಗತ್ಯ ಮತ್ತು ಅನಿವಾರ್ಯತೆ ಇದೆ. ಈ ಹಿಂದೆ ಐಐಟಿ ಅಂತಹ ಪ್ರಖ್ಯಾತ ಶಿಕ್ಷಣ ಸಂಸ್ಥೆಯನ್ನು ಹೋರಹೋಗಲು ಅವಕಾಶ ಮಾಡಿಕೊಟ್ಟು ಈ ಭಾಗದ ಕೆಟ್ಟ ರಾಜಕಾರಣಿಗಳು ಈಗ ಮತ್ತೆ ಬೋಯಿಂಗ್ ಆಸ್ಪತ್ರೆಯ ವಿಚಾರದಲ್ಲಿ ಅದೇ ನೀತಿಯನ್ನು ಅನುಸರಿಸುತ್ತಿದ್ದಾರೆ ಇದು ಖಂಡನೀಯ ಮತ್ತು ಜನದ್ರೋಹಿ ಕೆಲಸ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ್ ಸವದಿ ತಮ್ಮ ರಾಜಕೀಯ ಪ್ರಭಾವ ಬಳಿಸಿ ಲಾಭಿಗಾಗಿ ಬೆಳಗಾವಿ ಮತ್ತು ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ ಕಲ್ಬುರ್ಗಿ ಬೋಯಿಂಗ್ ಆಸ್ಪತ್ರೆಯನ್ನು ಮಂಜೂರು ಮಾಡಲು ಇಚ್ಚೆಯಿಂದ ಹರಸಾಹಸ ಪಡುತ್ತಿದ್ದಾರೆ. ಕಲ್ಬುರ್ಗಿ ಯಲ್ಲಿ ESI, ಜೀಮ್ಸ್, ಕಿದ್ವಾಯಿ ನಂತರ ಸೂಪರ್ ಸೆಪ್ಪಾಲೀಟ್ ಆಸ್ಪತ್ರೆ ಗಳಿವೆ ಅದರಂತೆ ಬೆಳಗಾವಿಯಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇವೆ. ನಮ್ಮಲ್ಲಿ ಇದ್ದ ಒಪೆಕ್ ಆಸ್ಪತ್ರೆ ಈಗ ಬಾಗಿಲು ಹಾಕುವ ಹಂತಕ್ಕೆ ಬಂದಿದೆ. ಲಕ್ಷ್ಮಣ್ ಸವದಿ ಮತ್ತು ಮುರುಗೇಶ ನಿರಾಣಿಯವರ ಕೆಲಸಕ್ಕೆ ನಮ್ಮ ಜಿಲ್ಲೆಯ ಆಡಳಿತ ಪಕ್ಷದ ಶಾಸಕರು, ಸಂಸದರು ಕೈ ಕಟ್ಟಿ ಕುಳಿತು ಅವರ ಕೆಲಸಗಳಿಗೆ ಸೊಪ್ಪು ಹಾಕುತ್ತಿರುವುದು ಅತ್ಯಂತ ಹೀನ ಜನ ವಿರೋಧಿ ಕೆಲಸ ಇವರು ಕೂಡಲೇ ಈ ವಿಚಾರದಲ್ಲಿ ಮುತುವರ್ಜಿ ವಹಿಸಿ ಬೋಯಿಂಗ್ ಆಸ್ಪತ್ರೆಯನ್ನು ರಾಯಚೂರು ಜಿಲ್ಲೆಯಲ್ಲೆ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಆಸ್ಪತ್ರೆ ಕೈ ತಪ್ಪಿದರೆ ಜಿಲ್ಲೆ ಸೇರಿ ರಾಜ್ಯವ್ಯಾಪಿ ಉಗ್ರವಾದ ಹೋರಾಟವನ್ನು ಮಾಡಿ ತಕ್ಕ ಪಾಠ ಕಲಿಸಬೇಕಾಗುತ್ತದೆಂದು SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

