ಕಸಾಪ ಚುನಾವಣೆ : ಶಿಖರಮಠ ಬೆಂಬಲಕ್ಕೆ ನಿಂತ ಸಮಾನಮನಸ್ಕ ಸಾಹಿತಿಗಳ ತಂಡ
ಲಿಂಗಸುಗೂರು : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರ ಚುನಾವಣೆ ನಡೆದಿದ್ದು, ಯುವ ಸಾಹಿತಿ ಮಲ್ಲಿಕಾರ್ಜುನಸ್ವಾಮಿ ಶಿಖರಮಠ ಇವರ ಬೆಂಬಲಕ್ಕೆ
ಲಿಂಗಸುಗೂರು ತಾಲೂಕಿನ ಯುವ ಸಾಹಿತಿಗಳು ಬೆಂಬಲಕ್ಕೆ ನಿಂತಿದ್ದಾರೆ.
ಈ ಬಗ್ಗೆ ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ
ಮಾತನಾಡಿದ ಸಾಹಿತಿ ಪತ್ರಕರ್ತ ಲಕ್ಷ್ಮಣ ಬಾರಿಕೇರ್, ಕನ್ನಡ ಸಾಹಿತ್ಯ ಪರಿಷತ್ತು ಕೆಲವರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ. ಒಂದೇ ಗುಂಪಿಗೆ ಅದಿಕಾರ ಅಂಟಿಕೊಂಡಿದ್ದು, ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಜನರೇ ಕಸಾಪವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಈ ಬಾರಿ ಯುವಕರಿಗೆ ಆಧ್ಯತೆ ನೀಡಬೇಕು ಎನ್ನುವ ನಿರ್ಧಾರ ಕೈಗೊಂಡಿರುವ ಸಮಾನ
ಮನಸ್ಕ ಸಾಹಿತಿಗಳು ಸೇರಿಕೊಂಡು ಹಿರಿಯ ಸಾಹಿತಿ ದಿ.ಎಸ್.ಜಿ.ಸ್ವಾಮಿಯವರ ಸುಪುತ್ರ ಮಲ್ಲಿಕಾರ್ಜುನಸ್ವಾಮಿ ಶಿಖರಮಠ ಅವರನ್ನು ಬೆಂಬಲಿಸುತ್ತಿದ್ದೇವೆ. ಯುವ ಪೀಳಿಗೆಯ ಸಾಹಿತಿಗಳು, ಹಿರಿಯರು ಸ್ವಾಮಿಯವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಲಿಂಗಸುಗೂರು ತಾಲೂಕಿನಲ್ಲಿ 811 ಜನ ಕಸಾಪ ಮತದಾರರಿದ್ದು,ಮೇ 09ಕ್ಕೆ ಚುನಾವಣೆಗಳು ಜರುಗಲಿವೆ. ಮಾರ್ಚ್ 29ರಿಂದ ನಾಮಪತ್ರಗಳು ಸಲ್ಲಿಕೆಯಾಗುತ್ತವೆ. ಈ ಬಾರಿ ಕಸಾಪಕ್ಕೆ ಹೊಸ ಯುವಕರಿಗೆ ಆಧ್ಯತೆ ನೀಡಬೇಕೆನ್ನುವ ಉದ್ದೇಶದಿಂದ ನಾವುಗಳು
ಶಿಖರಮಠರಿಗೆ ಬೆಂಬಲ ಸೂಚಿಸುತ್ತಿದ್ದೇವೆ. ಲಿಂಗಸುಗೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಕೆಲವರ ಸ್ವತ್ತಾಗಿದೆ. ಅಧಿಕಾರ ಕೇಂದ್ರೀಕರಣ ತಪ್ಪಿಸುವ ಮತ್ತು ಯುವ ಸಾಹಿತಿಗಳಿಗೆ ಆಧ್ಯೆ ನೀಡುವ ನಿಟ್ಟಿನಲ್ಲಿ ಕಸಾಪದಲ್ಲಿ ಬದಲಾವಣೆ ಮಾಡಬೇಕೆನ್ನುವ ಉದ್ದೇಶದಿಂದ ಜಿಲ್ಲೆಯಲ್ಲಿ
ಪ್ರವಾಸ ಕಾರ್ಯ ಕೈಗೊಳ್ಳುವ ಜೊತೆಗೆ ಶಿಖರಮಠದ ಆಯ್ಕೆ
ಮಾಡಲು ಶ್ರಮಿಸುತ್ತೇವೆಂದು ತಾಲೂಕು ಸಿರಿಗನ್ನಡ ಸಾಹಿತ್ಯ ವೇದಿಕೆ ಅದ್ಯಕ್ಷ ಶರಣಬಸವ ಮ್ಯಾಡಿ ಹೇಳಿದರು.
ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾಗಿ ಅಮರೇಶ ವೆಂಕಟಾಪೂರ, ಸಾಹಿತಿಗಳಾದ ಶರಣಪ್ಪ ಪರಮಾನಂದ, ಮಹಾಂತಗೌಡ ಪಾಟೀಲ್, ಅಮರಾನಂದ ಸೇರಿ ಇತರರು ಇದ್ದರು.

