ರಾಯಚೂರು

ತಿಂಗಳಿಂದ ಎಟಿಎಂ ಕೇಂದ್ರ ಬಂದ್ : ಗ್ರಾಹಕರ ಪರದಾಟಕ್ಕೆ ಕೊನೆ ಯಾವಾಗ..?

ಲಿಂಗಸುಗೂರು : ಸುಮಾರು ಒಂದು ತಿಂಗಳಿಂದ ಸ್ಥಳೀಯ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರ ಬಂದ್ ಆಗಿದ್ದು, ನಿತ್ಯ ನೂರಾರು ಗ್ರಾಹಕ್ಕೆ ಹಣ ಪಡೆಯಲು ಕೇಂದ್ರಕ್ಕೆ ಭೇಟಿ ನೀಡಿ ಪರದಾಡುವ ಪರಿಸ್ಥಿತಿ ಇದೆ. ಗ್ರಾಹಕರ ಪರದಾಟಕ್ಕೆ ಕೊನೆ ಯಾವಾಗ..? ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.


ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್‍ಗಳು ಒಂದಾದ ಬಳಿಕ ಸಿಂಡಿಕೇಟ್ ಬ್ರಾಂಚನ್ನು ಸಂಪೂರ್ಣವಾಗಿ ಮುಚ್ಚಿ ದಾಖಲಾಗಿ, ಗಣಕಯಂತ್ರಗಳ ಸಮೇತ ಸಿಬ್ಬಂಧಿಗಳೂ ಕೆನರಾ ಬ್ಯಾಂಕ್‍ಗೆ ಶಿಫ್ಟ್ ಆಗಿದ್ದಾರೆ. ಎರಡೂ ಬ್ಯಾಂಕ್‍ಗಳ ಗ್ರಾಹಕರು ಒಂದರಲ್ಲೇ ವ್ಯವಹಾರ ಮಾಡುವಂತಾಗಿದೆ. ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿವೆ. ಬ್ಯಾಂಕ್‍ಗೆ ಬರುವ ಗ್ರಾಹಕರೊಂದಿಗೆ ಈ ಶಾಖೆಯ ಮ್ಯಾನೇಜರ್ ಮಾತ್ರ ಸೌಜನ್ಯದಿಂದ ವರ್ತಿಸುವಲ್ಲಿ ವಿಫಲರಾಗಿದ್ದಾರೆ. ಯಾವುದೇ ಗ್ರಾಹಕರು ಮ್ಯಾನೇಜರ್ ಬಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಹೋದರೆ, ಅವರತ್ತ ತಿರುಗಿ ನೋಡದೇ ಸಿಬ್ಬಂಧಿಗಳ ಹತ್ತಿರ ಹೋಗುವಂತೆ ಬೆರಳು ಮಾಡಿ ತೋರಿಸುವ ಮೂಲಕ ಗ್ರಾಹಕರಿಗೆ ಸಮರ್ಪಕವಾಗಿ ಸ್ಪಂಧಿಸುವುದಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.


ತಿಂಗಳಿಂದ ಬಂದ್ ಆಗಿರುವ ಎಟಿಎಂ ಕೇಂದ್ರದ ದುರಸ್ತಿಗೆ ಮುಂದಾಗುವಲ್ಲಿ ಶಾಖಾ ವ್ಯವಸ್ಥಾಪಕರು ವಿಫಲರಾಗಿದ್ದಾರೆ. ಪರಿಣಾಮ ನಿತ್ಯ ಹಲವು ಜನ ಅನ್ಯ ಮಾರ್ಗವಿಲ್ಲದೇ, ಕ್ಯೂನಲ್ಲಿಯೇ ನಿಂತು ಕಣ ಪಡೆಯುತ್ತಿದ್ದಾರೆ. ಹೊಸತಾಗಿ ಎಟಿಎಂ ಕಾರ್ಡ್ ಪಡೆದವರು ಮಾತ್ರ ಕಡ್ಡಯವಾಗಿ ಮೊದಲ ವ್ಯವಹಾರ, ಪಿನ್ ಕ್ರಿಯೇಟ್ ಮಾಡಲು ಕೆನರಾ ಬ್ಯಾಂಕ್‍ನ ಎಟಿಎಂಅನ್ನೇ ಬಳಕೆ ಮಾಡಬೇಕು. ಆದರೆ, ಎಟಿಎಂ ತಾಂತ್ರಿಕವಾಗಿ ಕೆಟ್ಟದ್ದರಿಂದ ಜನರು ತೀವ್ರ ತೊಂದರೆಗೆ ಸಿಲುಕಿದಂತಾಗಿದೆ. ಇನ್ನು ಮುಂದಾದರೂ ಸಂಬಂಧಿಸಿದ ಶಾಖೆಯ ಮೇಲಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಗ್ರಾಹಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!