ಆಕಸ್ಮಿಕ ಬೆಂಕಿಗೆ ಎರಡು ಬಣಿವೆಗಳು ಭಸ್ಮ
ಲಿಂಗಸುಗೂರು : ಪುರಸಭೆ ವ್ಯಾಪ್ತಿಯ ಬೆಂಗಳೂರು ಬೈಪಾಸ್‍ನಲ್ಲಿರುವ ಜಮೀನೊಂದರಲ್ಲಿ ಸಂಗ್ರಹಿಸಿದ್ದ ಎರಡು ಬಣಿವೆಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗುವ ಮೂಲಕ ಭಸ್ಮವಾಗಿವೆ.
ಶರಣಪ್ಪ ಅಮಾತೆಪ್ಪ ಎನ್ನುವ ರೈತನ ಹೊಲದಲ್ಲಿ ಸಂಗ್ರಹಿಸಲಾಗಿದ್ದ ಶೇಂಗಾ ಹೊಟ್ಟು ಮತ್ತು ಮೇವಿನ ಎರಡು ಬಣಿವೆಗಳನ್ನು ಸಂಗ್ರಹಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆ ತಗುಲಿದ ಆಕಸ್ಮಿಕವಾಗಿ ಬೆಂಕಿ ತಗುಲಿಕೊಂಡು ಬಣಿವೆಗಳು ಸುಡಲಾರಂಭಿಸಿದಾಗ ಅಗ್ನಿಶಾಮಕ ಠಾಣೆಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂಧಿಗಳು ಕಾರ್ಯಪ್ರವೃತ್ತರಾದರೂ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಬಣಿವೆಗಳು ಸುಟ್ಟು ಕರಕಲಾಗಿವೆ ಎನ್ನುವ ಮಾತುಗಳು ಪ್ರತ್ಯಕ್ಷದರ್ಶಿಗಳದ್ದಾಗಿದೆ.

