ಸಿಎಂ ಹುಟ್ಟುಹಬ್ಬಕ್ಕೆ ಶುಭ ಕೋರಿದ ಚಿನ್ನದಗಣಿ ಅದ್ಯಕ್ಷ ವಜ್ಜಲ್
ಲಿಂಗಸುಗೂರು : ನಾಡಿನ ಹಿರಿಯ ಮುತ್ಸದ್ದಿ ರಾಜಕಾರಣಿ, ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪನವರ 79ನೇ ಹುಟ್ಟುಹಬ್ಬದ ಅಂಗವಾಗಿ ಹಟ್ಟಿ
ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಶುಭಕೋರಿದರು.
ಮುಖ್ಯಮಂತ್ರಿಗಳ ನಿವಾಸಕ್ಕೆ ಶನಿವಾರ ತೆರಳಿದ ವಜ್ಜಲ್
ಹೂಗುಚ್ಛ ನೀಡಿ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ನೂರು ವರ್ಷಗಳ ಕಾಲ ನಾಡಿನ ಜನರ ಸೇವೆ ಮಾಡುವ ಸೌಭಾಗ್ಯವನ್ನು
ಭಗವಂತ ಕರುಣಿಸಲೆಂದು ಶುಭ ಹಾರೈಸಿದರು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ
ಸಂದರ್ಭದಲ್ಲಿ ಇದ್ದರು.

