ಚಿನ್ನದ ಗಣಿ ಅಧ್ಯಕ್ಷರಿಗೆ ಮುದುಕಪ್ಪ ವಕೀಲರ ಸನ್ಮಾನ
ಲಿಂಗಸುಗೂರು : ಹಟ್ಟಿ ಚಿನ್ನದಗಣಿ ನೂತನ ಅಧ್ಯಕ್ಷರಾಗಿರುವ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಹಾಲುಮತ ಸಮಾಜದ ಹಿರಿಯ ಮುಖಂಡ ನ್ಯಾಯವಾದಿ ಮುದುಕಪ್ಪ ನೀರಲಕೇರಿಯವರು ಸನ್ಮಾನಿಸಿ ಅಭಿನಂದಿಸಿದರು.
ಎರಡು ಅವಧಿಗೆ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಅವರ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಇಂದಿಗೂ ಅಜರಾಮರವಾಗಿವೆ. ಸ್ಥಳೀಯರಿಗೆ ಸರಕಾರ ಚಿನ್ನದ ಗಣಿ ಅಧ್ಯಕ್ಷ ಸ್ಥಾನ ನೀಡಿರುವುದು ಸಂತಸದ ವಿಷಯ. ನೂತನವಾಗಿ ಆಯ್ಕೆಯಾಗಿರುವ ಚಿನ್ನದಗಣಿ ಅಧ್ಯಕ್ಷರು ಈ ಭಾಗದ ಅಭಿವೃದ್ಧಿಗೆ ಶ್ರಮಿಸಿ, ಚಿನ್ನದ ನಾಡಿನ ಕೀರ್ತಿಯನ್ನು ದೇಶಾದ್ಯಂತ ಪಸರಿಸಲಿ ಎಂದು ಮುದುಕಪ್ಪ ವಕೀಲರು ಕೋರಿದರು.
ಹಾಲುಮತ ಸಮಾಜದ ಪ್ರಭಾವಿ ಹಿರಿಯ ಮುಖಂಡರಾಗಿರುವ ಮುದುಕಪ್ಪ ಅವರು ಮಾನಪ್ಪ ವಜ್ಜಲ್ ರ ಸ್ನೇಹಿತರಾಗಿದ್ದು, ಅವರ ಈ ಭೇಟಿ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ. ವಜ್ಜಲ್ ಅವರ ಕಚೇರಿಗೆ ಆಗಮಿಸಿದ್ದ ಮುದುಕಪ್ಪ ಅವರು ಕುಶಲೋಪರಿ ನಡೆಸಿದರು.
ಬಿಜೆಪಿ ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಸಂಗಣ್ಣ ಗುಂತಗೋಳ ಸೇರಿ ಇತರರು ಇದ್ದರು.

