ಪಂಚಾಯತ್ ಚುನಾವಣೆ : ಬೂತ್‍ಮಟ್ಟದ ಅಧಿಕಾರಿಗಳ ತರಬೇತಿ
ಲಿಂಗಸುಗೂರು : ಪ್ರಸಕ್ತ ನಡೆಯುತ್ತಿರುವ ಪಂಚಾಯತ್ ಚುನಾವಣೆಗೆ ಡಿ.27ರಂದು ಮತದಾನ ನಡೆಯಲಿದ್ದು, ಬುಧವಾರ ಪಟ್ಟಣದ ಬಸವೇಶ್ವರ ಪಿಯು ಕಾಲೇಜಿನಲ್ಲಿ ಬೂತ್‍ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಆಯೋಗದ ಮಾರ್ಗಸೂಚಿಯಂತೆ ಚುನಾವಣೆ ಶಾಂತಿಯುತವಾಗಿ ನಡೆಯಲು ಮತ್ತು ಕೋವಿಡ್-19 ತಡೆಗಟ್ಟಲು ನಿಯಮಗಳ ಪಾಲನೆಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಹಸೀಲ್ದಾರ್ ಚಾಮರಾಜ ಪಾಟೀಲ್ ಸೂಚನೆ ನೀಡಿದರು.
ಮತದಾನದ ಒಂದು ಗಂಟೆ ಮುಂಚೆ ಮತಕೇಂದ್ರದಲ್ಲಿ ಸಿಬ್ಬಂದಿಗಳು ಸಿದ್ಧತೆಯಲ್ಲಿರಬೇಕು. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಟೋಕನ್ ನೀಡಿ ಸರದಿ ಪ್ರಕಾರ ಕರೆದು ಮತದಾನಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಬೇಕು.
ಬ್ಯಾಲೆಟ್ ಬಾಕ್ಸ್ ಸೀಲ್ ಮಾಡುವಾಗ ಅಭ್ಯರ್ಥಿ, ಏಜೆಂಟ್, ಪ್ರತಿನಿಧಿಯ ರುಜು ಹಾಕಿಸಿಕೊಳ್ಳಬೇಕು ಸೇರಿದಂತೆ ಇತರೆ ನಿಯಮಗಳ ಕುರಿತು ತರಬೇತುದಾರರಾದ ಪ್ರೊ.ಜಿ.ವಿ. ಕೆಂಚನಗುಡ್ಡ, ಪ್ರೊ.ಯಲ್ಲಪ್ಪ ಈಳಿಗೇರ, ಸಾಬಣ್ಣ ವಗ್ಗರ್ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

