ಮಹಿಳಾ ಸಾಧಕಿಯರಿಗೆ ಬಿಜೆಪಿ ಮಹಿಳಾ ಮೋರ್ಚಾದಿಂದ ಗೌರವ ಸನ್ಮಾನ
ಲಿಂಗಸುಗೂರು : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಜಿಲ್ಲೆಯಲ್ಲಿನ ವಿಶಿಷ್ಠ ಸಾಧಕಿಯರನ್ನು ಗುರುತಿಸಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಗೌರವ ಸನ್ಮಾನ ಮಾಡಿದರು.
ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವ
ಮೂಲಕ ಮಾದರಿ ರೈತ ಮಹಿಳೆಯಾಗಿ ಸಾಧನೆಗೈದಿರುವ ಕವಿತಾಳ ಪಟ್ಟಣದ ಕವಿತಾ ಮಿಶ್ರಾ ಹಾಗೂ ಕೊರೊನಾ ಸಂಕಷ್ಟದ ಕಾಲದಲ್ಲಿ ಕುಟುಂಬವನ್ನೂ ಲೆಕ್ಕಿಸದೇ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳುವ
ಮೂಲಕ ಸೇವೆಗೈದಿರುವ ಪೌರಕಾರ್ಮಿಕೆ ದುರುಗಮ್ಮ ಇವರ
ಸೇವೆಯನ್ನು ಸಾಧನೆಯನ್ನು ಗುರುತಿಸಿ ಅವರಿದ್ದ ಸ್ಥಳಕ್ಕೇ ತೆರಳಿ ಸಾಧಕಿಯರಿಗೆ ಗೌರವ ಸನ್ಮಾನ ಮಾಡಿದರು.
ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಹಿಳೆಯರಿಗೆ ಪ್ರೇರಣೆಯಾಗಿರುವ ನಮ್ಮ ಸಾಧಕರ ಜೀವನ ಇನ್ನಷ್ಟು ಮಾದರಿಯಾಗಿರಲೆಂದು ಬಿಜೆಪಿ ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಶ್ವೇತಾ ಲಾಲಗುಂದಿ ಶುಭ ಹಾರೈಸಿದರು.
ಮಹಿಳಾ ಮೋರ್ಚಾದ ಅದ್ಯಕ್ಷೆ ಜಯಶ್ರೀ ಸಕ್ರಿ, ನೀಲಮ್ಮ ಅನ್ವರಿ,ಜ್ಯೋತಿ ಸುಂಕದ್, ಸ್ಮಿತಾ ಅಂಗಡಿ, ಭಾನುಮತಿ, ಶಂಕ್ರಮ್ಮ, ಸುಮಾ,ಮಲ್ಲಮ್ಮ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

