ರಾಯಚೂರು

ಯೋಗೇಂದ್ರ ಯಾದವ್ ನೇತೃತ್ವದಲ್ಲಿ ನಾಳೆಯಿಂದ ಕೃಷಿ ಅಭಿಯಾನ

ಲಿಂಗಸುಗೂರು : ದೇಶಕ್ಕೆ ಅನ್ನ ನೀಡುತ್ತಿರುವ ರೈತನ ಬದುಕು ಚಿಂತಾಜನಕ ಸ್ಥಿತಿಯಲ್ಲಿದೆ. ತಾನು ಬೆಳೆದ ಬೆಳೆಗೇ ದರ ನಿಗದಿ ಮಾಡುವ ಸ್ವಾತಂತ್ರ ರೈತನಿಗಿಲ್ಲ. ರೈತಾಪಿವರ್ಗದಲ್ಲಿ ಬೆಂಬಲ ಬೆಲೆ, ವೈಜ್ಞಾನಿಕ
ಬೆಲೆಗಳ ಬಗ್ಗೆ ಜಾಗೃತಿ ಮೂಡಿಸಲು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅದ್ಯಕ್ಷ ಯೋಗೇಂದ್ರ ಯಾದವ್ ಅವರ ನೇತೃತ್ವದಲ್ಲಿ ನಾಳೆಯಿಂದ (ಮಾ.05) ಮೂರು ದಿನಗಳ ಕಾಲ ರಾಜ್ಯವ್ಯಾಪಿ ಕೃಷಿ ಅಭಿಯಾನ ನಡೆಯಲಿದೆ ಎಂದು ರೈತ ಸಂಘದ ರಾಜ್ಯ ಮುಖಂಡ ಅಮರಣ್ಣ ಗುಡಿಹಾಳ ಹೇಳಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ
ನಡೆಸಿದ ಅವರು, 1991ರಿಂದ ಈಚೆಗೆ ಗ್ಯಾಟ್ ಒಪ್ಪಂದವಾದ ಬಳಿಕ ರೈತಾಪಿವರ್ಗದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಕಾರ ರೂಪಿಸುವ ನಿಯಮಗಳು ಕೇವಲ ರೈತರ ಮೂಗಿಗೆ ತುಪ್ಪ ಸವರುವ
ಕೆಲಸಗಳಾಗಿವೆಯೇ ಹೊರತು, ಯಾವುದೇ ಯೋಜನೆಯಿಂದ ರೈತರಿಗೆ ಕಿಂಚಿತ್ತೂ ಆಸರೆಯಾಗಿಲ್ಲ. ರೈತರ ಆತ್ಮಹತ್ಯೆ ತಡೆಗೆ ಸಾಲಮನ್ನಾ,ಸಬ್ಸಿಡಿಗಳೇ ಪರಿಹಾರವಲ್ಲ. ಬದಲಿಗೆ ರೈತರು ಬೆಳೆಗೆ ವೈಜ್ಞಾನಿಕವಾಗಿ ಬೆಂಬಲ
ಬೆಲೆ ನಿಗದಿ ಮಾಡುವ ಮೂಲಕ ಸರಕಾರಗಳು ರೈತರ ಸಂಕಷ್ಟಕ್ಕೆ ನೆರವಾಗಬೇಕು. ಈ ಉದ್ದೇಶದಿಂದ ರೈತರಲ್ಲಿ ಜಾಗೃತಿ ಮೂಡಿಸಲು ಯೋಗೇಂದ್ರ ಯಾದವ್ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದಾರೆ.

ಇಂದು ಮಾರ್ಚ್ 05ಕ್ಕೆ ಗುಲಬರ್ಗಾ ನಗರದ ಎಪಿಎಂಸಿಯಲ್ಲಿ ವರ್ತಕರು ಹಾಗೂ ರೈತರ ಸಭೆ ಮಾಡಲಾಗಿದ್ದಾರೆ. ಮಾರ್ಚ್ 06ಕ್ಕೆ ಚಿತ್ರದುರ್ಗ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜಾಗೃತಿ ಸಭೆ ನಡೆಸಲಿದ್ದಾರೆ. ಮಾರ್ಚ್ 07ಕ್ಕೆ ಶಿವಮೊಗ್ಗದ ಎಪಿಎಂಸಿಯಲ್ಲಿ ಕೃಷಿಕರು
ಮತ್ತು ವರ್ತಕರ ಸಭೆಯನ್ನು ನಡೆಸುತ್ತಾರೆ. ಏತನ್ಮಧ್ಯೆ
ಲಿಂಗಸುಗೂರು ಎಪಿಎಂಸಿಗೂ ಬರುವ ನಿರೀಕ್ಷೆಗಳಿವೆ. ರಾಷ್ಟ್ರೀಯ ಅದ್ಯಕ್ಷರೊಂದಿಗೆ ಪಕ್ಷದ ರಾಜ್ಯ ಗೌರವಾದ್ಯಕ್ಷ ಚಾಮರಸ ಮಾಲಿಪಾಟೀಲ್,ಅದ್ಯಕ್ಷ ಪಟಗಲಪುರ ನಾಗೇಂದ್ರ ಸೇರಿ ರಾಜ್ಯದ ಮುಖಂಡರುಗಳು ಸೇರಿ
ಸಾವಿರಾರು ರೈತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಅಮರಣ್ಣ .

ರೈತ ಮುಖಂಡರಾದ ಕುಪ್ಪಣ್ಣ ಗೋನವಾಟ್ಲಾ, ಅಮರೇಗೌಡ
ಯರಡೋಣಿ ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!