ರಾಯಚೂರು

ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳ ಸಹಾಯಕ್ಕೆ ಒತ್ತಾಯ

ಲಿಂಗಸುಗೂರು : ಕೋವಿಡ್ ಸಂಕ್ರಮಣ ಕಾಲದಲ್ಲಿ ಪೋಷಕರನ್ನುಕಳೆದುಕೊಂಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸರಕಾರಸಹಾಯ ಮಾಡಬೇಕೆಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಶೇಷನ್ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದರು.ಶಾಸಕ ಡಿ.ಎಸ್.ಹೂಲಗೇರಿಯವರಿಗೆ ಮನವಿ ಸಲ್ಲಿಸಿದ ಅವರು,ಲಾಕ್‍ಡೌನ್‍ನಿಂದಾಗಿ ಅನೇಕ ಪೋಷಕರು ಎದುರಿಸುತ್ತಿರುವ ಆರ್ಥಿಕಸಂಕಷ್ಟದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮುಂದಿನಶೈಕ್ಷಣಿಕ ವರ್ಷದವರೆಗೂ ರಾಜ್ಯದ ಸರಕಾರಿ, ಅನುದಾನಿತ ಮತ್ತುಅನುದಾನರಹಿತ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಪ್ರವೇಶ ಶುಲ್ಕದ ಒಟ್ಟುವಾರ್ಷಿಕ ಶುಲ್ಕ ಮತ್ತು ಪರೀಕ್ಷಾ ಶುಲ್ಕದ ಶೇ.50ರಷ್ಟು ಹಣವನ್ನುಕಡಿತಗೊಳಿಸಬೇಕು ಹಾಗೂ ಶುಲ್ಕವನ್ನು ಮೂರು ಕಂತುಗಳಲ್ಲಿಭರಿಸಲು ಪೋಷಕರಿಗೆ ಅವಕಾಶ ನೀಡಬೇಕು.ಕೋವಿಡ್ ಸೊಂಕಿನಿಂದ ಪೋಷಕರನ್ನು ಕಳೆದುಕೊಂಡುಅನಾಥವಾಗಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದಸ್ನಾತಕೋತ್ತರ ಪದವಿ ಶಿಕ್ಷಣದವರೆಗೆ ವಿಶೇಷ ವಿದ್ಯಾರ್ಥಿ ವೇತನವನ್ನುನೀಡಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶಪ್ರಕ್ರಿಯೆಯಲ್ಲಿ ಪೋಷಕರ ಮರಣ ಪ್ರಮಾಣ ಪತ್ರವನ್ನು ನೀಡುವವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಬೇಕು. ಆ ಪ್ರವೇಶ ಶುಲ್ಕದಹಣವನ್ನು ಸರಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಕರಡಕಲ್, ಎಸ್‍ಐಓಸಂಘಟನೆ ತಾಲೂಕು ಅದ್ಯಕ್ಷ ಶೇಖ ಆಫ್ರಿದಿ, ಜಮಾತೆ ಇಸ್ಲಾಮಿ ಹಿಂದ್‍ನಸಂಚಾಲಕ ಮೊಹಮ್ಮದ್ ಜಹೀರುದ್ದೀನ್ (ಗೌಸ್), ಜಿಲ್ಲಾ ಕಾರ್ಯದರ್ಶಿ ಅಬ್ದುಲ್ನಯೀಮ್, ತಾಲೂಕು ಕಾರ್ಯದರ್ಶಿ ಅಲ್ಲಾಬಕ್ಷ, ಸದಸ್ಯರಾದ ರಿಯಾಜ್, ಶೌಕತ್,ಸೈಯದ್ ವದೂದ್ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!