ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬುದ್ಧ ಪಂಚಮಿ ಆಚರಣೆ
ಲಿಂಗಸುಗೂರು : ಮೌಡ್ಯತೆಯನ್ನು ಬದಿಗೊತ್ತಿ ಮಕ್ಕಳಿಗೆ ಹಾಲು
ಕುಡಿಸುವ ಮೂಲಕ ವಿಶೇಷವಾಗಿ ಬುದ್ಧ ಪಂಚಮಿ ಹಬ್ಬವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಆಚರಿಸಿದರು.
ಮೌಢ್ಯತೆಯನ್ನು ಪ್ರತಿಬಿಂಬಿಸುವ ಆಚರಣೆಗಳನ್ನು
ಕೈಬಿಟ್ಟು, ಜನರು ವೈಜ್ಞಾನಿಕವಾಗಿ ಚಿಂತನೆಗಳನ್ನು
ಬೆಳೆಸಿಕೊಳ್ಳಬೇಕು. ಹಾವಿನ ಹುತ್ತಕ್ಕೆ ಹಾಲು ಎರೆಯುವದರಿಂದ
ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಹಸಿದ ಹೊಟ್ಟೆಗೆ ಹಾಲು ನೀಡಿ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಶೇಖರ ಕುಂಬಾರ ಕರೆ ನೀಡಿದರು.
ಪಂಚಮಿ ಹೆಸರಿನಲ್ಲಿ ಕಲ್ಲು, ಬೆಳ್ಳಿ, ಮಣ್ಣು ನಾಗ ದೇವತೆಗಳಿಗೆ
ಹಾಲೆರೆಯುವ ಸಂಪ್ರದಾಯಕ್ಕೆ ತಿಲಾಂಜಲಿ ಇಡುವ ನಿಟ್ಟಿನಲ್ಲಿ ದಸಂಸ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ.ಸಮಾಜದಲ್ಲಿ ಬೇರೂರಿರುವ ಮೌಡ್ಯಾಚರಣೆಗಳನ್ನು ಕ್ರಮೇಣ ಕೈಬಿಡುವ ನಿಟ್ಟಿನಲ್ಲಿ ಪ್ರಗತಿಪರ ಚಿಂತನೆಗಳು ಒಗ್ಗಟ್ಟಾಗಬೇಕೆಂದು ಪತ್ರಕರ್ತ ಬಿ.ಎ.ನಂದಿಕೋಲಮಠ ಮಾತನಾಡಿದರು.
ದಸಂಸದ ಸಾಮಾಜಿಕ ಜಾಲತಾಣದ ಅದ್ಯಕ್ಷ ಅಕ್ರಂಪಾಷಾ,
ಮುಖಂಡರಾದ ಅಮರಮ್ಮ ಮೇಗಳಮನಿ, ಹುಸೇನಪ್ಪ ತರಕಾರಿ,
ಯಲ್ಲಪ್ಪ ಹಾಲಭಾವಿ, ಹನುಮಂತಗೌಡ ಪಾಟೀಲ್ ಸೇರಿ ಮಕ್ಕಳು ಕಾರ್ಯಕ್ರಮದಲ್ಲಿ ಇದ್ದರು.

