ಕರಡಕಲ್ ಪ್ರಾಥಮಿಕ ಶಾಲೆ ಎಸ್‍ಡಿಎಂಸಿ ಅದ್ಯಕ್ಷ- ಉಪಾದ್ಯಕ್ಷರ ಆಯ್ಕೆ
ಲಿಂಗಸುಗೂರು : ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅದ್ಯಕ್ಷರಾಗಿ ತಿಪ್ಪಣ್ಣ ಮ್ಯಾಗಳಮನಿ, ಉಪಾದ್ಯಕ್ಷರಾಗಿ ರಜಿಯಾಬಿ ಇಮಾಮಸಾಬ
ಆಯ್ಕೆಯಾಗಿದ್ದಾರೆ.
ಕೋವಿಡ್ ಮಹಾಮಾರಿಯ ಸಂಕಟದಿಂದ ಇತ್ತೀಚೆಗೆ ಎಲ್ಲಾ
ಕ್ಷೇತ್ರಗಳು ಸುಧಾರಿಸಿಕೊಳ್ಳುತ್ತಿದ್ದು, ಶೈಕ್ಷಣಿಕ ಕ್ಷೇತ್ರವೂ
ತನ್ನ ಕಾರ್ಯಚಟುವಟಿಕೆಗಳನ್ನು ನಿಧಾನವಾಗಿ ಆರಂಭಿಸುತ್ತಿದೆ.ಶಾಲೆಗಳ ಅಭಿವೃದ್ಧಿಗಾಗಿ ಇರುವ ಶಾಲಾ ಮೇಲುಸ್ತುವಾರಿ ಸಮಿತಿಗಳ ರಚನೆ ಕಾರ್ಯ ನಡೆಯುತ್ತಿದ್ದು, ಪ್ರಸಕ್ತ ಅವಧಿಗೆ ತಿಪ್ಪಣ್ಣ ಹಾಗೂ ರಜಿಯಾಬಿ ಮೇಲುಸ್ತುವಾರಿ ಸಮಿತಿಗೆ ಆಯ್ಕೆಯಾಗಿದ್ದಾರೆಂದು ಶಾಲೆಯ
ಪ್ರಭಾರಿ ಮುಖ್ಯಶಿಕ್ಷಕ ಬಾಬು ರಾಜೇಂದ್ರ ತಿಳಿಸಿದ್ದಾರೆ.
ಆಯ್ಕೆಯಾದ ಸದಸ್ಯರು ಹಾಗೂ ಅದ್ಯಕ್ಷ-ಉಪಾದ್ಯಕ್ಷರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನೂ ಶಾಲೆಯಲ್ಲಿ ಆಯೋಜಿಸಲಾಗಿತ್ತು.ಗ್ರಾಮದ ಹಿರಿಯರಾದ ಭೂಪನಗೌಡ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್, ನಿಂಬೆಣ್ಣ ಕುಂಬಾರ, ಹನುಮಂತಪ್ಪ, ಮಂಜುಳಾ ಶರಣಪ್ಪ ಸೇರಿ ಗಣ್ಯರು ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಈ
ಸಂದರ್ಭದಲ್ಲಿ ಇದ್ದರು.

