ಶಿವನಗೌಡ ನಾಯಕರಿಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ
ಲಿಂಗಸುಗೂರು : ದೇವದುರ್ಗದ ಶಾಸಕ ಶಿವನಗೌಡ ನಾಯಕ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ರಿಯಲ್ ಎಸ್ಟೇಟ್ ಉದ್ದಿಮೆದಾರ ಚೆನ್ನುಕುಮಾರ ಬಲಶೆಟ್ಟಿಹಾಳ ಆಗ್ರಹಿಸಿದ್ದಾರೆ.
ಶಿವನಗೌಡ ನಾಯಕ ಅವರು ನಾಲ್ಕು ಭಾರಿ ಶಾಸಕರಾಗಿ, ಮಾಜಿ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಏಷ್ಯದಲ್ಲಿ ಅತಿ ಹಿಂದುಳಿದ ತಾಲೂಕು ಎಂದು ಅಪಕೀರ್ತಿಗೆ ಒಳಗಾಗಿದ್ದ ದೇವದುರ್ಗ ತಾಲೂಕಿಗೆ ಶಿವನಗೌಡ ನಾಯಕ ಅವರು ಶಾಸಕರಾದ ನಂತರ ದೇವದುರ್ಗ ಸಮಗ್ರ ಚಿತ್ರಣವೇ ಬದಲಾಯಿಸಿದ್ದಾರೆ. ಜಿಲ್ಲೆಯಲ್ಲೇ ಅಭಿವೃದ್ಧಿ ಹೊಂದಿದ ತಾಲೂಕು ಎಂಬ ಕಿರ್ತಿ ಪಾತ್ರವಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ವೇಳೆಯಲ್ಲಿ ಕಲುಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಐಐಟಿ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು. ಬದಲಾದ ರಾಜಕೀಯದಲ್ಲಿ ಐಐಟಿ ಕೈತಪ್ಪಿ ಈಗ ಐಐಐಟಿ ಮಂಜೂರಾಗಿದ್ದು ಅದಕ್ಕೆ ಪ್ರಮುಖ ಕಾರಣವೇ ಶಿವನಗೌಡ ನಾಯಕರು.
ಅಭಿವೃದ್ಧಿಯ ದೂರದೃಷ್ಠಿಕೂನವುಳ್ಳ ಶಿವನಗೌಡ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಇಲ್ಲವೇ ಸಚಿವ ಸ್ಥಾನವಾದರೂ ನೀಡಬೇಕು. ಕಳೆದ ಎರಡು ಅವಧಿಯ ಸರ್ಕಾರದಲ್ಲಿ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಲಾಗಿದೆ. ಆದರೆ ಈ ಭಾರಿಯಾದರೂ ಜಿಲ್ಲೆಯನ್ನು ಪರಿಗಣಿಸಿ ಶಿವನಗೌಡ ನಾಯಕರಿಗೆ ಡಿಸಿಎಂ ಅಥವಾ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಹಾಗೂ ಬಿಜೆಪಿ ಹೈಕಮಾಂಡ್‍ನ ನಾಯಕರಲ್ಲಿ ಒತ್ತಾಯಿಸಿದ್ದಾರೆ.

