ಪತ್ರಕರ್ತರಿಗೆ ಕುರ್ಚಿ ಮುಖ್ಯವಲ್ಲ, ಸುದ್ದಿ ಮುಖ್ಯ :ಸಿದ್ಧಣ್ಣನವರ್ ಕಿವಿಮಾತು
ಲಿಂಗಸುಗೂರು : ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ವರದಿಗಾಗಿ ತೆರಳಿದ್ದಾಗ ತಮಗೆ ಕುರ್ಚಿ ಸಿಗಲಿಲ್ಲವೆಂದು ಆಯೋಜಕರ ಮೇಲೆ ಮುನಿಸಿಕೊಳ್ಳುವುದು. ಕಾರ್ಯಕ್ರಮದ ವ್ಯತಿರಿಕ್ತವಾಗಿ ಸಮಾಜಕ್ಕೆ ತಪ್ಪು ಮಾಹಿತಿ ನೀಡುವುದು ಪ್ರಬುದ್ಧ ಪತ್ರಕರ್ತರ ಲಕ್ಷಣವಲ್ಲ. ಕುರ್ಚಿ ಸಿಗದಿದ್ದರೂ, ಹೋಗಿರುವ ಕಾರ್ಯಕ್ರಮದ ವರದಿಯನ್ನು ವಸ್ತುನಿಷ್ಠವಾಗಿ ಪಡೆದು ಸಮಾಜಕ್ಕೆ ಮುಟ್ಟಿಸುವವನೇ ನಿಜವಾದ ಪತ್ರಕರ್ತ. ಯಾವತ್ತೂ ಪತ್ರಕರ್ತರು ಕುರ್ಚಿಯ ಬೆನ್ನತ್ತದೇ,ಸುದ್ದಿಯ ಬೆನ್ನತ್ತಬೇಕು ಎಂದು ಕನ್ನಡಪ್ರಭ ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ಧಣ್ಣನವರ್ ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಸ್ಥಳೀಯ ಸಾಂಸ್ಕøತಿಕ ಭವನದಲ್ಲಿ ಕರ್ನಾಟಕ ಕಾರ್ಯನಿರತ
ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಆವರಿಸಿಕೊಂಡಿರುವ ಕೋವಿಡ್ ಮಹಾಮಾರಿ ಪತ್ರಕರ್ತರ ಸ್ವಾತಂತ್ರ್ಯವನ್ನೂ ಕಿತ್ತುಕೊಂಡಿರುವುದು ದುರಂತವೇ ಸರಿ. ಸಮಾಜದ ಸ್ವಾಸ್ಥ್ಯ ಹದಗೆಡುತ್ತಿರುವ ಬಗ್ಗೆ ಪತ್ರಕರ್ತರು ತಮ್ಮ ಸ್ವಾಸ್ಥ್ಯವನ್ನೂ ಲೆಕ್ಕಿಸದೇ ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದರು.
ಆದರೆ, ಸರಕಾರ ಮಾತ್ರ ಪತ್ರಕರ್ತರನ್ನು ಗಣನೆಗೇ
ತೆಗೆದುಕೊಳ್ಳಲಿಲ್ಲ. ಗ್ರಾಮೀಣ ಮಟ್ಟದಲ್ಲಿನ ಪತ್ರಕರ್ತರು ಹತ್ತಾರು
ಸಮಸ್ಯೆಗಳಿಂದ ನರಳುತ್ತಿದ್ದರೂ, ಅವುಗಳನ್ನು ಎಲ್ಲಿಯೂ
ತೋರ್ಪಡಿಸದೇ ಸಮಾಜಮುಖಿಯಾದ ಕೆಲಸಗಳನ್ನು ಮಾಡುತ್ತಿದ್ದಾರೆ.ಸರಕಾರ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳತ್ತ ಗಮನ ಹರಿಸಿ,ಕನಿಷ್ಠ ಮಟ್ಟಡ ಸವಲತ್ತುಗಳನ್ನು ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು.
ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಲು
ಪ್ರತಿಯೊಬ್ಬ ಪತ್ರಕರ್ತರು ಪ್ರಯತ್ನ ಪಡಬೇಕು.ಪತ್ರಕರ್ತರಾದವರು ಸಮಾಜದಲ್ಲಿ ದೇವದಾಸಿ, ಅನಕ್ಷರತೆ, ಬಾಲ್ಯ ವಿವಾಹ,ಜಾತಿ ನಿಂದನೆ ಸೇರಿ ಎಲ್ಲಾ ಪದ್ದತಿಗಳನ್ನು ಹೋಗಲಾಡಿಸಲು ಪತ್ರಕರ್ತರು ಮುಂದಾಗಬೇಕು ಎಂದರು.
ಒಳ್ಳೆಯ ಸಮಾಜ ಕಟ್ಟಲಿಕೆ ಲಿಂಗಸುಗೂರು ಪತ್ರಕರ್ತರು
ಮಾದರಿಯಾಗಿದ್ದಾರೆ. ಸಾರ್ವಜನಿಕರು ಮುಖಂಡರು ಹಾಗೂ ಪತ್ರಕರ್ತರು ಸೇರಿ ಪಟ್ಟಣದ ಅಭಿವೃದ್ಧಿಗಾಗಿ ಲಿಂಗಸುಗೂರು ಅಭಿವೃದ್ಧಿ ಫೋರಂ ರಚಿಸಿ ಶ್ರಮಿಸಬೇಕು. ಒಂದು ಗ್ರಾಮದಲ್ಲಿ ಜನತೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆಂದರೆ ಪತ್ರಕರ್ತರು ವಿಫಲವಾಗಿದ್ದಾರೆಂದು ಅರ್ಥ.ಪತ್ರಕರ್ತರು ತಾಳ್ಮೆ, ಶಿಸ್ತು, ಸಂಯಮವನ್ನು ಬೆಳೆಸಿಕೊಳ್ಳುವುದು ಅಭಿವೃದ್ಧಿಗೆ ಪೂರಕವೆಂದು ಸಿದ್ಧಣ್ಣನವರ್ ಹೇಳಿದರು.
ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ
ರಾಜ್ಯದಲ್ಲಿಯೇ ತಾಲೂಕು ಮಟ್ಟದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಪತ್ರಿಕಾ ಭವನದ ಕಟ್ಟಡ ನಮ್ಮಲ್ಲಿ ಇರುವುದು ಹೆಮ್ಮೆಯ ವಿಷಯ. ಈಗಾಗಲೇ ಮಾಜಿ ಸಂಸದರು, ನಾವುಗಳು ಕಟ್ಟಡಕ್ಕೆ ಅನುದಾನ ನೀಡಿದ್ದೇವೆ. ಬರುವ ದಿನಗಳಲ್ಲಿ ಬೇಕಾಗುವ ಅಗತ್ಯ ಹೆಚ್ಚುವರಿ ಅನುದಾನ ನೀಡಿ ಪತ್ರಿಕಾ ಭವನದ ಕಾಮಗಾರಿಯನ್ನು ಪೂರ್ತಿಸುವುದಾಗಿ ಶಾಸಕ ಡಿ.ಎಸ್.ಹೂಲಗೇರಿ ಭರವಸೆ ನೀಡಿದರು.
ಸಮಾರಂಭದಲ್ಲಿ ಡಿ.ವಿ.ಗುಂಡಪ್ಪನವರ ಭಾವಚಿತ್ರಕ್ಕೆ
ಮಾಲಾರ್ಪಣೆ ಮಾಡಿದ ಅವರು, ತಾಲೂಕಿನ ಎಲ್ಲಾ ಪತ್ರಕರ್ತರಿಗೆ ಲ್ಯಾಪ್‍ಟಾಪ್ ಬ್ಯಾಗ್‍ಗಳನ್ನು ತಮ್ಮ ಕಡೆಯಿಂದ ಬಳುವಳಿಯಾಗಿ ನೀಡಿದ್ದಲ್ಲದೇ,ಸಮಾರಂಭ ನಡೆಯಲು ಸಹಾಯ-ಸಹಕಾರ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಶಿವರಾಜ ಕೆಂಭಾವಿ ಸಮಾರಂಭದ
ಅದ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ,ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಗುರುನಾಥ, ಜಿಲ್ಲಾ ಉಪಾದ್ಯಕ್ಷ ರಾಘವೇಂದ್ರ ಗುಮಾಸ್ತೆ, ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಭೋವಿ ವೇದಿಕೆಯಲ್ಲಿದ್ದರು. ಹಿರಿಯ ಪತ್ರಕರ್ತ ಬಿ.ಎ.ನಂದಿಕೋಲಮಠ ನಿರೂಪಿಸಿದರು.
ತಾಲೂಕು ಪ್ರದಾನ ಕಾರ್ಯದರ್ಶಿ
ಗುರುರಾಜ ಗೌಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಘನಮಠದಯ್ಯ ಮಹಾಂತಿನಮಠ ಸ್ವಾಗತಿಸಿದರು. ಅಮರೇಶಸ್ವಾಮಿ ಬಲ್ಲಟಗಿ ಪ್ರಾರ್ಥಿಸಿದರು.
ಹಿರಿಯ ಪತ್ರಕರ್ತರನ್ನು ಸಮಾರಂಭದಲ್ಲಿ ಸನ್ಮಾನಿಸಿ
ಗೌರವಿಸಲಾಯಿತು. ಕನ್ನಡ ಪರ, ಪ್ರಗತಿಪರ ಸೇರಿ ವಿವಿಧ ಸಂಘಟನೆ ಪದಾಧಿಕಾರಿಗಳು, ರಾಜಕೀಯ ಮುಖಂಡರುಗಳು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
