ರಾಯಚೂರು

ವಿಕಲ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದ ಶಾಸಕ ಹೂಲಗೇರಿ

ಲಿಂಗಸುಗೂರು : 2018-19ನೇ ಸಾಲಿನ ಶಾಸಕರ ಸ್ಥಳೀಯ
ಪ್ರದೇಶಾಭೀವೃದ್ಧಿ ಯೋಜನೆಯಡಿ ವಿಕಲ ಚೇತನರಿಗೆ ಸ್ಥಳೀಯ
ಕ್ರೀಡಾಂಗಣದಲ್ಲಿ ಶಾಸಕ ಡಿ.ಎಸ್.ಹೂಲಗೇರಿ 23 ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿದರು.

ಸರಕಾರದ ಸವಲತ್ತುಗಳನ್ನು ಸದ್ಬಳಕೆ
ಮಾಡಿಕೊಳ್ಳಬೇಕು. ಶಾಸಕರ ಅನುದಾನದಲ್ಲಿ ಸಾಧ್ಯವಾದಷ್ಟು ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಣ ಹಂಚಿಕೆ ಮಾಡಲಾಗುತ್ತದೆ.ಪ್ರತಿ ವರ್ಷವೂ ವಿಕಲ ಚೇತನರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡಲು ಬದ್ಧರಿರುವುದಾಗಿ ಶಾಸಕರು ಹೇಳಿದರು. ಅಲ್ಲದೇ 14ನೇ ಹಣಕಾಸಿನ ಸ್ವಚ್ಛಭಾರತ ಮಿಷನ್ ಅಡಿಯಲ್ಲಿ ಖರೀದಿಸಲಾದ ಟಾಟಾಏಸ್ ವಾಹನಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ಕಸವಿಲೇವಾರಿ ಮಾಡಲು ಪಂಚಾಯಿತಿಗಳಿಗೆ ಹಸ್ತಾಂತರಿಸಲಾಯಿತು.

ಸಹಾಯಕ ಆಯುಕ್ತ ರಾಹುಲ್ ಸಂಕನೂರು, ಪುರಸಭೆ
ಅದ್ಯಕ್ಷೆ ಗದ್ದೆಮ್ಮ ಭೋವಿ, ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು ಸೇರಿ ಅಧಿಕಾರಿಗಳು ಹಾಗೂ ವಿಕಲ ಚೇತನ ಸಂಘಟನೆಯ ರಾಜ್ಯ ಮುಖಂಡರು, ಜಿಲ್ಲಾ ಮುಖಂಡರು ಸೇರಿ ಫಲಾನುಭವಿಗಳು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!