ಫೆ.13ಕ್ಕೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಛಲವಾದಿ ಸದಸ್ಯರಿಗೆ ಸನ್ಮಾನ
ಲಿಂಗಸುಗೂರು : ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಗಳ ಚುನಾವಣೆಯಲ್ಲಿ ಛಲವಾದಿ ಸಮುದಾಯದಿಂದ ಆಯ್ಕೆಯಾದ ನೂತನ ಸದಸ್ಯರುಗಳಿಗೆ ಜಿಲ್ಲಾ ಮಟ್ಟದಲ್ಲಿ ಫೆ.13ಕ್ಕೆ ಛಲವಾದಿ ಮಹಾಸಭಾದ ವತಿಯಿಂದ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಮಹಾಸಭಾದ ಅದ್ಯಕ್ಷ ಲಿಂಗಪ್ಪ ಪರಂಗಿ ತಿಳಿಸಿದ್ದಾರೆ.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು, ಪಟ್ಟಣ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಸದಸ್ಯರುಗಳಿಗೆ ಗೌರವ ಸಲ್ಲಿಸಲು ರಾಯಚೂರಿನಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭಕ್ಕೆ ನೂತನ ಸದಸ್ಯರುಗಳು ಹಾಗೂ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದಾರೆ.
ಮಹಾಸಭಾದ ಗೌರವಾದ್ಯಕ್ಷ ಶಿವಯೋಗಪ್ಪ, ಮುಖಂಡರಾದ ಕುಪ್ಪಣ್ಣ ಹೊಸಮನಿ, ಸಂಜೀವಪ್ಪ ಹುನಕುಂಟಿ, ಶಿವಣ್ಣ ಪರಂಗಿ, ಮಹಾಂತಪ್ಪ ಹೊಸಮನಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

