ರಾಯಚೂರು

ಡಾ.ಅಂಬೇಡ್ಕರ್, ಡಾ.ಜಗಜೀವನರಾಮ್ ಜಯಂತಿ ಆಚರಣೆಗೆ ಮನವಿ

ಲಿಂಗಸುಗೂರು : ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರುಗಳ ಜಯಂತಿಗಳನ್ನು ಹಟ್ಟಿ ಚಿನ್ನದಗಣಿ ವತಿಯಿಂದ ಆಚರಣೆ ಮಾಡಲು ಆದೇಶ ಹೊರಡಿಸಬೇಕೆಂದು ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರಿಗೆ ಆದಿ ಜಾಂಬವ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.


ಕಳೆದ ವರ್ಷ ಸಾಂಕ್ರಾಮಿಕ ರೋಗದಿಂದ ಜಯಂತಿಗಳ ಆಚರಣೆ ಆಗಿರುವುದಿಲ್ಲ. ಈ ಬಾರಿ 2021-22ನೇ ಆರ್ಥಿಕ ವರ್ಷದಲ್ಲಿ ಜಯಂತಿಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಆದೇಶಿಸಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಜಿ.ಪಂ., ತಾ.ಪಂ. ಸದಸ್ಯರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ವಿದ್ಯಾರ್ಥಿ, ಕ್ರೀಡಾಪಟು, ಸಾಹಿತಿಗಳು, ಹೋರಾಟಗಾರರು ಸೇರಿ ಜಿಲ್ಲೆಯ ವಿವಿಧ ರಂಗಗಳಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಬೇಕು. ಕಲಾ ತಂಡಗಳನ್ನು ಹಾಗೂ ಸಂಗೀತಕಾರರನ್ನು ಕಾರ್ಯಕ್ರಮಕ್ಕೆ ಕರೆಸುವುದು. ಕಂಪನಿ ವತಿಯಿಂದ ಆಹ್ವಾನ ಪತ್ರಿಕೆ, ಬ್ಯಾನರ್ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮನವಿಯಲ್ಲಿ ವಿವರಿಸಿದ್ದಾರೆ.


ಸಂಘದ ಅದ್ಯಕ್ಷ ಸಿದ್ರಾಮಪ್ಪ ಸಂಗೇಪಾಗ್, ರಮೇಶ ಗೋಸ್ಲೆ, ಚಂದ್ರಕಾಂತ ಹೊನ್ನಹಳ್ಳಿ, ದೇವೇಂದ್ರ ಪಂಜಲರ್, ದುರುಗಪ್ಪ ಹೊಸಮನಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!