ಎಲ್.ಪಿ.ಎಲ್. ಕ್ರಿಕೇಟ್ ಟೂರ್ನಮೆಂಟ್‍ಗೆ ಚಾಲನೆ
ಲಿಂಗಸುಗೂರು : ತಾಲೂಕಿನ ಕಾಳಾಪೂರ ಗ್ರಾಮದಲ್ಲಿ ಆರ್.ಎಸ್. ನಾಡಗೌಡ್ರ ವತಿಯಿಂದ ಕಾಳಾಪೂರ ಪ್ರೀಮಿಯರ್ ಲೀಗ್ (ಎಲ್‍ಪಿಎಲ್) ಸೀಸನ್-1 ಕ್ರಿಕೇಟ್ ಟೂರ್ನಮೆಂಟ್‍ಗೆ ಪಂಚಾಯಿತಿ ಮಾಜಿ ಅದ್ಯಕ್ಷ ಅಮರೇಶ ನಾಡಗೌಡ್ರು ಚಾಲನೆ ನೀಡಿದರು.
ಇಂದಿನಿಂದ ಆರಂಭವಾಗುವ ಕ್ರಿಕೇಟ್ ಟೂರ್ನಮೆಂಟ್ 15 ದಿನಗಳ ವರೆಗೆ ನಡೆಯಲಿವೆ. ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸಿದ್ದು, 10 ಓವರ್‍ನ ಮ್ಯಾಚ್‍ಗಳು ನಡೆಯಲಿದ್ದು, ಅಂತಿಮ ಪಂದ್ಯವನ್ನು ಗೆದ್ದ ವಿಜೇತರಿಗೆ ಅಮರೇಶ ನಾಡಗೌಡ್ರು 25 ಸಾವಿರ ರೂಪಾಯಿ ಮತ್ತು ಟ್ರೋಫಿ, ವಿಜಯಕುಮಾರ ಹೊಸಗೌಡ್ರು 15 ಸಾವಿರ ರೂಪಾಯಿ ಮತ್ತು ಟ್ರೋಫಿ ಕೊಡಲಾಗುವುದು. ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುವುದೆಂದು ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

