ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಕರವೇ ಸನ್ಮಾನ
ಲಿಂಗಸುಗೂರು : ಸ್ಥಳೀಯ ಪುರಸಭೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಮೋದ ಕುಲಕರ್ಣಿಯವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಿಲಾನಿಪಾಷಾ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.
ಪುರಸಭೆಯ ಕಚೇರಿಗೆ ತೆರಳಿದ ಅವರು ನೂತನ ಸ್ಥಾಯಿ ಅಧ್ಯಕ್ಷರಿಗೆ ಸನ್ಮಾನಿಸಿ, ಪಟ್ಟಣದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಸಾರ್ವಜನಿಕರ ತೊಂದರೆಗಳನ್ನು ನೀಗಿಸುವಂತೆ ಮನವಿ ಮಾಡಿದರು.
ಕರವೇ ಸಂಘಟನೆಯ ಕಾರ್ಯದರ್ಶಿ ಶಿವರಾಜ್ ನಾಯಕ್, ಅಜಿಜ್ ಪಾಷಾ, ಚಂದ್ರು ನಾಯಕ, ಹನುಮಂತ ನಾಯಕ, ರವಿ ಬರಗುಡಿ, ಜಮೀರ್, ಇಮ್ರಾನ್, ಮಹಬೂಬ್ ಇತರರು ಇದ್ದರು.

