ರಾಯಚೂರು

ಎಸ್ಎಫ್ಐ ಜಿಲ್ಲಾಧ್ಯಕ್ಷ ಈಗ ಗ್ರಾಮ ಪಂಚಾಯಿತಿ ಸದಸ್ಯ..!

ವರದಿ : ಖಾಜಾಹುಸೇನ್

ಲಿಂಗಸುಗೂರು : ಹೋರಾಟ, ಸಂಘಟನೆಯ ಮೂಲಕ ಜನಪರ ಕಾಳಜಿಯುಳ್ಳ ಯುವಕ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ ಅವರು ಗೆಜ್ಜಲಗಟ್ಟ ಗ್ರಾಮ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕೇವಲ ಹಣ, ಅಧಿಕಾರದ ಮೂಲಕ ಚುನಾವಣೆ ಗೆಲ್ಲಬಹುದು ಎನ್ನುವ ಮಾತನ್ನು ಸುಳ್ಳಾಗಿಸುವ ಮೂಲಕ ಈ ಸಾಮಾನ್ಯ ಯುವಕ ರಮೇಶ ತನ್ನ ಓರಗೆಯವರ ಸಾಧನೆಯಿಂದ ಸಿಪಿಎಂ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಗೆಜ್ಜಲಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪುರ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ ತನ್ನ ಪ್ರತಿಸ್ಪರ್ಧಿಯನ್ನು ಪರಾಭವಗೊಳಿಸಿ 16 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.

ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ರಮೇಶ್ ಅವರ ಗೆಲುವು ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕೇವಲ ಹಣಕ್ಕೆ ಮಾರು ಹೋಗುವ ಬದಲು ಪ್ರಜ್ಞಾವಂತ ಮತದಾರರು ವ್ಯಕ್ತಿಯನ್ನು ಗುರುತಿಸಿರುವುದು ಇಲ್ಲಿ ಗಮನಾರ್ಹ.

ಹನ್ನೊಂದರಲ್ಲಿ ಇನ್ನೊಂದು ಎನ್ನುವಂತಾಗದೆ ರಮೇಶ್ ಅವರು ಅಳವಡಿಸಿಕೊಂಡಿರುವ ತತ್ವ-ಸಿದ್ಧಾಂತಗಳಡಿ ಸರಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಲು ಮುಂದಾಗಬೇಕಿದೆ..

Leave a Reply

Your email address will not be published. Required fields are marked *

error: Content is protected !!